balaji hospital ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆ ಆವರಣದಲ್ಲಿ ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಅವರು ಸ್ವಾತಂತ್ರೊೃೀತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿದರು.  
ಧಾರವಾಡ

balaji hospital ಬಾಲಾಜಿ ಆಸ್ಪತ್ರೆಯಲ್ಲಿ ಸಂಭ್ರಮ

ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವ ನಿಮಿತ್ತ ಇಲ್ಲಿಯ ಬಾಲಾಜಿ ಆಸ್ಪತ್ರೆ

balaji hospital

ಆವರಣದಲ್ಲಿ ಶನಿವಾರ ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಹಲವಾರು ಮಹನೀಯರ ಶೌರ್ಯ, ಪರಾಕ್ರಮ, ತ್ಯಾಗ, ಬಲಿದಾನದಿಂದ ಸ್ವಾತಂತ್ರೃ ಪಡೆದ ನಮ್ಮ ಹೆಮ್ಮೆಯ ಭಾರತವು ನಮ್ಮೆಲ್ಲರ ಮಾತೃಭೂಮಿಯೇ ಹೊರತು ಕೇವಲ ಭೂಮಿ ಮಾತ್ರವಲ್ಲ. ದೇಶಭಕ್ತಿ ಪ್ರತಿಯೊಬ್ಬರಲ್ಲೂ ನಿರಂತರವಾಗಿ ಮೊಳಗಬೇಕು. ನಮ್ಮತನ ಮೈಗೂಡಿಸಿಕೊಂಡಾಗ ಮಾತ್ರ ನೈಜ ಸ್ವಾತಂತ್ರೃ ಪಡೆದಂತಾಗಲಿದೆ ಎಂದರು.
ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಅಧ್ಯಕ್ಷತೆ ವಹಿಸಿದ್ದರು.
ಆರ್‌ಎಸ್‌ಎಸ್‌ನ ಸುರೇಶ ಜಿ., ನಿವೃತ್ತ ಯೋಧ ಎಂ.ಕೆ. ನಾಯ್ಕರ, ಆಸ್ಪತ್ರೆಯ ವೈದ್ಯರಾದ ಡಾ. ಆನಂದ ಕೊಪ್ಪದ, ಡಾ. ನಿಖಿಲ್ ಢಗೆ, ಡಾ. ಜಯಮೇಜಯ, ಇತರರು ಉಪಸ್ಥಿತರಿದ್ದರು.