bad roads ಹುಬ್ಬಳ್ಳಿಯ ನವನಗರ ಬಳಿಯ ಕೆಸಿಸಿ ಬ್ಯಾಂಕ್​ ಲೇಔಟ್​ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿರುವುದು. 
ಧಾರವಾಡ

bad roads ಈ ರೋಡನ್ಯಾಗ್ ನಡೆಯೋದೇ ಕಷ್ಟ ನೋಡ್ರಿ

ಪ್ರಮುಖ ಮುಖ್ಯಾಂಶಗಳು

  • ಕೆಸಿಸಿ ಬ್ಯಾಂಕ್​ ಲೇಔಟ್​ ರಸ್ತೆ ಗುಂಡಿಮಯ
  • ದುರಸ್ತಿಗೆ ಕೂಡಿಬರದ ಕಾಲ
  • ಪಾಲಿಕೆ ವಿರುದ್ಧ ನಿವಾಸಿಗಳ ಆಕ್ರೋಶ
ಹುಬ್ಬಳ್ಳಿ: bad roads ಇಲ್ಲಿಯ ನವನಗರದ ಕೆಸಿಸಿ ಬ್ಯಾಂಕ್​ ಲೇಔಟ್​ ನಿರ್ಮಾಣವಾಗಿ ದಶಕಗಳೇ ಕಳೆದಿದ್ದರೂ ರಸ್ತೆಗಳು ಮಾತ್ರ ಸಂಚರಿಸಲು ಬಾರದಂತಿವೆ.
ಮಳೆಗಾಲದಲ್ಲಿ ರಸ್ತೆಗಳು ರಾಡಿಮಯವಾಗುತ್ತವೆ. ರಸ್ತೆಯಲ್ಲಿ ತಗ್ಗು ಗುಂಡಿಗಳ ಕಾಣದೇ ಅನೇಕರು ಬಿದ್ದು ಪೆಟ್ಟು ತಿಂದಿದ್ದಾರೆ.
ಸದ್ಯ ಮಳೆ ಸುರಿಯುತ್ತಿರುವುದರಿಂದ ಮತ್ತೆ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಇಲ್ಲಿನ ಜನರು ಹೊರಗೆ ಬರಬೇಕೆಂದರೆ ಭಯ ಪಡುವಂತಾಗಿದೆ.
ಎಲ್ಲ ರೀತಿಯ ತೆರಿಗೆ, ಶುಲ್ಕಗಳನ್ನು ಪಾವತಿಸಿ ಅಧಿಕೃತವಾಗಿ ನಿರ್ಮಾಣವಾದ ಬಡಾವಣೆಯ ಗತಿಯೇ ಹೀಗಾದರೆ ಹೇಗೆ? ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ನಾವು ಕೂಡ ಮಹಾನಗರ ಪಾಲಿಕೆಗೆ ಎಲ್ಲ ತೆರಿಗೆಗಳನ್ನು ಭರಿಸುತ್ತೇವೆ. ಆದರೂ ಸೌಲಭ್ಯಗಳಿಲ್ಲದೇ ಪರದಾಡಬೇಕಿದೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.
ಇಲ್ಲಿಯ ರಸ್ತೆಗಳನ್ನು ಸುಧಾರಿಸಿ ಕನಿಷ್ಠ ಪಕ್ಷ ಓಡಾಡಲು ಅನುಕೂಲ ಮಾಡಿಕೊಡಿ, ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಬಹಳಷ್ಟು ಸಲ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂಥಾ ರೋಡನ್ಯಾಗ್ ಹೆಂಗ್ ಓಡಾಡಬೇಕ್ರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕೆಸಿಸಿ ಬ್ಯಾಂಕ್​ ಲೇಔಟ್​ ಹಾಗೂ ಪಕ್ಕದ ಕಾಲನಿಗಳು ಗಾಮನಗಟ್ಟಿ ಹಾಗೂ ಭೈರಿದೇವರಕೊಪ್ಪ ಮಧ್ಯದಲ್ಲಿ ಬರುತ್ತವೆ. ಇದು ಪಶ್ಚಿಮ ವಿಧಾನಸಭಾ ಕ್ಷೇತ್ರ, ಸೆಂಟ್ರಲ್​ ವಿಧಾನಸಭಾ ಕ್ಷೇತ್ರ ಸೇರಿ ಇಬ್ಬರು ಶಾಸಕರ ಕ್ಷೇತ್ರಗಳ ಗಡಿ ಭಾಗವಾಗಿದೆ. ಕಾರ್ಪೋರೇಟರ್ ಗಳು ಸಹ ಇಬ್ಬರಿದ್ದು, ಎರಡು ವಾರ್ಡ್​ಗಳ ಮಧ್ಯದ ಸ್ಥಳವಾಗಿದೆ.