ಪೌರಕಾರ್ಮಿಕರಿಗೆ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಧಾರವಾಡ: ಆಯುರ್ವೇದವು ಭಾರತದ ಪುರಾತನ ವೈದ್ಯಕಿಯ ಪರಂಪರೆಯಾಗಿದ್ದು, ಆರೋಗ್ಯ ರಕ್ಷಣೆಯಲ್ಲಿ ಅದರ ಮಹತ್ವವನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದು ಉಪ ಮೇಯರ್ ರತ್ನಾಬಾಯಿ ನಾಝರೆ ಹೇಳಿದರು.
ಆಯುರ್ವೇದ ದಿನಾಚರಣೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವಾ ದಿನ ಆಚರಣೆ ಹಿನ್ನೆಲೆಯಲ್ಲಿ ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಸಿ.ಬಿ. ಗುತ್ತಲ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಧಾರವಾಡದ ಪುರುಷೋತ್ತಮ ದಾಸ್ ಟಂಡನ್ ಹಿಂದಿ ಭವನದಲ್ಲಿ ಪೌರಕಾಮಿರ್ಕರಿಗೆ ಗುರುವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾಮಿರ್ಕರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಸ್ವಾಗತಾರ್ಹವಾಗಿದ್ದು, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಆಯುರ್ವೇದವು ಭಾರತೀಯ ಪರಂಪರೆಯ ಅಮೂಲ್ಯ ಕೊಡುಗೆಯಾಗಿದ್ದು, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಹಾಗೂ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಪೌರಕಾಮಿರ್ಕರು ನಗರ ಸ್ವಚ್ಛತೆಗಾಗಿ ಪ್ರತಿದಿನ ಶ್ರಮಿಸುತ್ತಿದ್ದು, ಅವರ ಆರೋಗ್ಯದ ಕಾಳಜಿ ವಹಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಆರೋಗ್ಯ ತಪಾಸಣೆ ಶಿಬಿರವು ಶ್ಲಾನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಭಾ ಕರ್ನಾಟಕದ ಕಾರ್ಯಾಧ್ಯಕ್ಷ, ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಸೇವಾ ದಿನದ ಅಂಗವಾಗಿ ಸಮಾಜದ ವಿವಿಧ ವರ್ಗಗಳಿಗೆ ಆರೋಗ್ಯ ಸೇವೆ ತಲುಪಿಸುವುದು ನಮ್ಮ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಭಾಗವಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ಪೌರಕಾಮಿರ್ಕರಿಗೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಿ, ಅಗತ್ಯ ವೈದ್ಯಕಿಯ ಸಲಹೆ ಹಾಗೂ ಆಯುರ್ವೇದ ಚಿಕಿತ್ಸಾ ಪದ್ಧತಿಯ ಕುರಿತು ಅರಿವು ಮೂಡಿಸಲಾಯಿತು.
ಡಾ. ವಿಜಯ್ ಗುಂಟ್ರಾಳ, ಬಸವರಾಜ ವಸ್ತ್ರದ, ಬಸವರಾಜ ತಾಳಿಕೋಟಿ, ಜಗದೀಶ ಮಳಗಿ, ಉಮಾ ಚವ್ಹಾಣ, ಡಾ. ಬಿ.ಎಚ್. ವೆಂಕಟರೆಡ್ಡಿ ಇತರರಿದ್ದರು.