ಕಲಾ ವೈಭವ" ಕಾರ್ಯಕ್ರಮ ಉದ್ಘಾಟನೆ
ಧಾರವಾಡ: ಕಲೆ, ಸಾಹಿತ್ಯ ಹಾಗೂ ಸಂಸತಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಸಾಂಸತಿಕ ಚಟುವಟಿಕೆಗಳನ್ನು ಏರ್ಪಡಿಸಬೇಕು. ಕ್ರಿಯಾಶೀಲ ಸಂ&ಸಂಸ್ಥೆಗಳ ಮೂಲಕ ಕಲೆ, ಸಂಸತಿಯ ಜಾಗೃತಿ ಮೂಡಿಸುವುದು ಅವಶ್ಯವಿದೆ ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯೆ ಸವಿತಾ ಅಮರಶೆಟ್ಟಿ ಹೇಳಿದರು.
ನಟಸೇಖರ ಪಂ. ಬಸವರಾಜ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ "ಕಲಾ ವೈಭವ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸತ ಡಾ. ಪ್ರಕಾಶ ಮಲ್ಲಿಗವಾಡ ಮಾತನಾಡಿ, ಗ್ರಾಮ ಜೀವನ ಕೂಡ ಆಧುನೀಕರಣಗೊಂಡು ದೇಶೀಯ ಕಲೆಗಳು, ಸಂಪ್ರದಾಯಗಳು ನಶಿಸುತ್ತಿವೆ. ಉತ್ತಮ ಸಮಾಜ ನಿಮಿರ್ಸುವಲ್ಲಿ ಪೂರ್ವಜರ ಸಂಪ್ರದಾಯಗಳನ್ನು ಮುಂದುವರಿಸಬೇಕು ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿರ್ಮಲ ಮಹೇಂದ್ರಕರ, ಗೀತಾ ಚಿಕ್ಕಮಠ, ಮುದುಕಪ್ಪ ಬೆಂಗೇರಿ, ಬಸವರಾಜ ಸುಂಕದ, ಇಶಿತಾ ಮಡಿಕೇರಿ, ಸಿ.ಬಿ. ಪಲ್ಯದ, ಐಶ್ವರ್ಯ ಅಷ್ಟೇಕರ, ಮನೋಹರ ಪತ್ತಾರ, ಶ್ರೀಶೈಲಗೌಡ ಕಮತರ, ಸಂಗಮೇಶ ಬೂದಿಹಾಳ ಅವರಿಗೆ ಟ್ರಸ್ಟ್ನಿಂದ "ಸಾಧನ ಭೂಷಣ ಪ್ರಶಸ್ತಿ" ನೀಡಿ ಗೌರವಿಸಲಾಯಿತು.
ಬುದ್ಧಧರ್ಮ ಗುರು ಪಬ್ಬಜ್ಜೋರವಿ ತಿಪಾಲಿ ವಿಜ್ಜಾಮುನಿಯೋ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಶಿವಾನಂದ ಅಮರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವ ಅಸೋಸಿಯೇಟ್ಸ್ ಅಧ್ಯಕ್ಷ ಶಾಂತೇಶ ಚಿಕ್ಕಲಕಿ, ಉದ್ಯಮಿ ವೀರಣ್ಣ ಅಮರಶೆಟ್ಟಿ, ಜನಪದ ಕಲಾವಿದ ಪ್ರಭು ಕುಂದರಗಿ, ಪ್ರವಿಣ ಜೀವಣ್ಣವರ, ಶರಣಪ್ಪ ಹೊಸಮನಿ, ಸದಾನಂದ ಹಡಗಲಿ ಇತರರಿದ್ದರು.
ಸಂತೋಷ ಅಮರಶೆಟ್ಟಿ ಪರಿಚಯಿಸಿದರು. ಮಣಿಪಾಲ ರೆಡ್ಡಿ ನಿರೂಪಿಸಿದರು. ಮೀನಾಕ್ಷಿ ಯರೆಮನಿ ವಂದಿಸಿದರು. ನಂತರ ವಿವಿಧ ಕಲಾ ತಂಡಗಳಿಂದ ಸಾಂಸತಿಕ ಕಾರ್ಯಕ್ರಮಗಳು ಜರುಗಿದವು.