ಜಿಪಿಬಿಡಿ- 4 ಶೇಂಗಾ ತಳಿ. 
ಧಾರವಾಡ

ಕೃಷಿ ವಿವಿ ಅಭಿವೃದ್ಧಿಪಡಿಸಿದ ಜಿಪಿಬಿಡಿ- 4 ತಳಿಗೆ ಪ್ರಶಸ್ತಿ

ಮಂಜುನಾಥ ಅಂಗಡಿ
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯವು 2004ರಲ್ಲಿ ಅಭಿವೃದ್ಧಿಪಡಿಸಿದ ಜಿಪಿಬಿಡಿ- 4 ಶೇಂಗಾ ತಳಿಯು ಐಎಸ್​ಎಸ್​ಸಿಎ&2026 ಪ್ರಶಸ್ತಿಗೆ (ಬೆಳೆ ಸುಧಾರಣೆ ಮತ್ತು ಉತ್ಪಾದನಾ ತಂತ್ರಜ್ಞಾನಗಳು ವಿಭಾಗ) ಆಯ್ಕೆಯಾಗಿದೆ.
ಐಸಿಆರ್​ಐಎಸ್​ಎಟಿ, ಐಎಎಸ್​ಸಿಎನಿಂದ ಸೆ. 12ರಂದು ನವದೆಹಲಿಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ರೈತರಿಗೆ ಚಿರಪರಿಚಿತ ಜಿಪಿಬಿಡಿ- 4 ತಳಿಯನ್ನು ಈವರೆಗೆ 11 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಬೆಳೆಯಲಾಗಿದೆ. ಇದು ಎಲೆಚುಕ್ಕೆ ಮತ್ತು ತುಕ್ಕು ರೋಗ ನಿರೋಧಕ ಗುಣ ಹೊಂದಿದ್ದು, ಅಧಿಕ ಇಳುವರಿ ನೀಡುತ್ತದೆ.