ನಗರ ಸಾರಿಗೆ ಬಸ್​ ನಿಲ್ದಾಣ ಸುತ್ತ ಆಟೋಗಳ ಕಾಟ 
ಧಾರವಾಡ

ನಗರ ಸಾರಿಗೆ ಬಸ್​ ನಿಲ್ದಾಣ ಸುತ್ತ ಆಟೋಗಳ ಕಾಟ Auto menace CBT

ಧಾರವಾಡ: ಸಾರಿಗೆ ಸಂಸ್ಥೆಯ ಧಾರವಾಡ ನಗರ ಸಾರಿಗೆ ಬಸ್​ ನಿಲ್ದಾಣವನ್ನು (ಸಿಬಿಟಿ) ಇತ್ತೀಚೆಗೆ ನವೀಕರಣ ಮಾಡಲಾಗಿದೆ. ಕೆಲ ಮೂಲ ಸೌಕರ್ಯಗಳಿಲ್ಲದೆ ತರಾತುರಿಯಲ್ಲಿ ಉದ್ಘಾಟನೆ ನೆರವೇರಿಸಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ನಗರ ಜನತೆಯ ದಶಕದ ಬೇಡಿಕೆಯ ನಂತರ ಸರ್ಕಾರ ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದೊಂದಿಗೆ 13.11 ಕೋಟಿ ರೂಪಾಯಿ ವೆಚ್ಚದಲ್ಲಿ ನಗರ ಸಾರಿಗೆ ಬಸ್​ ನಿಲ್ದಾಣ ನಿಮಿರ್ಸಿದೆ. ನ. 7ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದ್ದಾರೆ. ನ. 17ರಿಂದ ಬಸ್​ಗಳ ಸಂಚಾರ ಆರಂಭವಾಗಿದೆ.
* ಆಟೋಗಳ ಅಟಾಟೋಪ: ಸಿಬಿಟಿ ನಿರ್ಮಾಣ ಕಾಮಗಾರಿ ಆರಂಭವಾದಾಗಿನಿಂದ ಕಟ್ಟಡದ ಸುತ್ತಲೂ ತಗಡು ಹಾಕಲಾಗಿತ್ತು. ಇಲ್ಲಿಂದ ಬಸ್​ಗಳ ಓಡಾಟ ಇಲ್ಲದಿರುವುದರಿಂದ ಆಟೋ ರಿಾಗಳದ್ದೇ ಕಾರುಬಾರು ಇತ್ತು. ಇದೀಗ ಸಿಬಿಟಿ ಉದ್ಘಾಟನೆಗೊಂಡ ಬಳಿಕವೂ ಆಟೋಗಳ ಅಟಾಟೋಪ ನಿಂತಿಲ್ಲ. ಬಸ್​ಗಳು ಅಂಕಣ ಪ್ರವೇಶಿಸುವ ದ್ವಾರದ ಬಳಿಯೇ ಆಟೋಗಳು ನಿಲ್ಲುತ್ತಿವೆ. ನಿಲ್ದಾಣ ನಿಯಂತ್ರಣಾಧಿಕಾರಿ ಮಾತಿಗೆ ಬೆಲೆ ಇಲ್ಲದಾಗಿದೆ.
ಸಿಬಿಟಿಯ 4 ಅಂಕಣಗಳಲ್ಲಿ ಬೆಂಚ್​ಗಳನ್ನು ಅಳವಡಿಸಲಾಗಿದೆ. ಇಲ್ಲಿಂದ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಕೆಲ ಸಮಯದಲ್ಲಿ ಪ್ರಯಾಣಿಕರು ನೆಲಕ್ಕೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಬಸ್​ಗಳ ನಿಲುಗಡೆಗೆ 4 ಅಂಕಣಗಳ ಸುಸಜ್ಜಿತ ಕಟ್ಟಡ ಇದಾಗಿದೆ. ಮಹಿಳೆಯರು& ಪುರುಷರಿಗೆ ಪ್ರತ್ಯೇಕ ಶೌಚಗೃಹಗಳಿವೆ. ಆದರೆ, ವಿಶೇಷ ಚೇತನರಿಗೆ ರ್ಯಾಂಪ್​ ವ್ಯವಸ್ಥೆ ಮತ್ತು ಲ್ಟಿ್​ ವ್ಯವಸ್ಥೆ ಇನ್ನೂ ಆಗಿಲ್ಲ. ಮಹಿಳೆಯರಿಗಾಗಿ ವಿಶ್ರಾಂತಿ ಗೃಹ& ಶಿಶುಪಾಲನಾ ಕೊಠಡಿ ನಿಮಿರ್ಸಲಾಗಿದ್ದರೂ ಬೀಗ ಹಾಕಲಾಗಿರುತ್ತದೆ. ಆರಂಭದಲ್ಲಿ ಕೊಠಡಿ ತೆರೆಯಲಾಗಿತ್ತಾದರೂ ಮಹಿಳೆಯರ ಹೊರತಾಗಿ ಎಲ್ಲ ವಯೋಮಾನದವರೂ ಕುಳಿತುಕೊಳ್ಳುತ್ತಿದ್ದರು. ಹೀಗಾಗಿ ಬಾಗಿಲಿಗೆ ಬೀಗ ಹಾಕಲಾಗಿದ್ದು, ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರು ಸಾರಿಗೆ ಸಿಬ್ಬಂದಿಯನ್ನು ಕೇಳಿ ಕೀಲಿಕೈ ಪಡೆಯಬೇಕಾಗಿದೆ.
"

ಸಿಬಿಟಿಯಿಂದ ಸಂಚರಿಸುವ ಬಸ್​ಗಳಿಗೆ ಸ್ಪರ್ಧೆಯೊಡ್ಡುವಷ್ಟು ಆಟೋಗಳು ಸಂಚರಿಸುತ್ತಿವೆ. ಪಾಲಿಕೆಯಿಂದ ಪ್ರತ್ಯೇಕ ಆಟೋ ನಿಲ್ದಾಣ ವ್ಯವಸ್ಥೆ ಮಾಡಿಸಿಕೊಳ್ಳಲು ಆಟೋ ಸಂಟನೆಗಳಿಗೆ ಸೂಚಿಸಲಾಗಿದೆ. ಬಸ್​ಗಳು ಅಂಕಣ ಪ್ರವೇಶಿಸುವ ದ್ವಾರದ ಬಳಿ ಆಟೋಗಳು ನಿಲ್ಲದಂತೆ ಆರಂಭದಲ್ಲಿ ಪೊಲೀಸರು ನಿಯಂತ್ರಿಸಿದ್ದರು. ಆದರೆ, ಆಟೋ ಚಾಲಕರಿಗೆ ಪೊಲೀಸರ ಭಯವೂ ಇಲ್ಲದಂತೆ ಸಂಚರಿಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಕೋರಿ ಪೊಲೀಸ್​ ಇಲಾಖೆಗೆ ಪತ್ರ ನೀಡಿದರೂ ಪ್ರಯೋಜನವಾಗಿಲ್ಲ.

— ಎಂ. ಸಿದ್ದಲಿಂಗೇಶ, ವಿಭಾಗೀಯ ನಿಯಂತ್ರಣಾಧಿಕಾರಿ, ಹು&ಧಾ ನಗರ ಸಾರಿಗೆ ವಿಭಾಗ