ಎಲ್​ಪಿಜಿ ಬಂಕ್​ಳು ಬಂದ್​ 
ಧಾರವಾಡ

ಆಟೋ ಎಲ್​ಪಿಜಿ ಬಂಕ್​ಗಳು ಬಂದ್​

ಮಂಜುನಾಥ ಅಂಗಡಿ
ಧಾರವಾಡ: ಗ್ಯಾಸ್​ ಸಿಲಿಂಡರ್​ಗಳ ಅಭಾವ ಒಂದೆಡೆಯಾದರೆ ನಗರದ ಆಟೋ ಗ್ಯಾಸ್​ಗೂ ಬರ ಎದುರಾಗಿದೆ. ನಗರದಲ್ಲಿರುವ 6 ಎಲ್​ಪಿಜಿ ಬಂಕ್​ಳು ಬಂದ್​ ಆಗಿವೆ.
ನಗರದ ವಿದ್ಯಾಗಿರಿಯ ಜಿಯೋ ಎಲ್​ಪಿಜಿ, ಮೈಸೂರು ಗ್ಯಾರೇಜ್​ ಬಳಿಯ ಗೋ ಗ್ಯಾಸ್​, ಓಲ್ಡ್​ ಎಸ್​ಪಿ ವೃತ್ತದ ಎಲ್​ಪಿಜಿ ಬಂಕ್​, ಹೊಸಯಲ್ಲಾಪುರ ಮುಖ್ಯ ರಸ್ತೆಯಲ್ಲಿರುವ ಸೂಪರ್​ ಗ್ಯಾಸ್​ ಬಂಕ್​ ಹಾಗೂ ಹೆಬ್ಬಳ್ಳಿ ರಸ್ತೆಯ ಎಲ್​ಪಿಜಿ ಬಂಕ್​ಗಳು ಸರಬರಾಜು ಇಲ್ಲದೆ ಶುಕ್ರವಾರ ಬೆಳಗ್ಗೆಯಿಂದ ಬಂದ್​ ಆಗಿವೆ.
ಈ ಬಂಕ್​ಗಳನ್ನು ಅವಲಂಬಿಸಿದ್ದ ಆಟೋ ಚಾಲಕರು ಎಲ್​ಪಿಜಿ ಸಿಗದಿರುವುದರಿಂದ ಆಟೋಗಳನ್ನು ಮನೆ ಮುಂದೆ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ರಾಯಾಪುರದಲ್ಲಿರುವ ಬಂಕ್​ನಲ್ಲಿ ಎಲ್​ಪಿಜಿ ಸಿಗುತ್ತಿರುವ ಮಾಹಿತಿ ತಿಳಿದು ಆಟೋ ಚಾಲಕರು ಮುಗಿಬಿದ್ದಿದ್ದರು. ಬೆಳಗ್ಗೆಯಿಂದಲೇ ಆಟೋಗಳ ಸರದಿ ಸಾಲು ಇತ್ತು.