ಪರ್ಲ್ ಲೇಔಟ್‌ನಲ್ಲಿ ಮನೆಗಳಿಗೆ ದರೋಡೆ (robbery) ಯತ್ನ  
ಧಾರವಾಡ

(robbery) ದರೋಡೆ ಯತ್ನ ನಡೆಸಿ ಪರಾರಿ?

ಮರಿದೇವ ಹೂಗಾರ
ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಪರ್ಲ್ ಲೇಔಟ್‌ನಲ್ಲಿ ಒಂದೆರಡು ಮನೆಗಳಿಗೆ ದರೋಡೆ (robbery) ಯತ್ನ ನಡೆದಿದ್ದು, ಸ್ಥಳೀಯರು ಹಾಗೂ ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ತಪ್ಪಿದೆ.
ದರೋಡೆಕೋರರು ಮನೆಯ ಗೇಟ್ ಮುರಿಯುತ್ತಿದ್ದ ವೇಳೆ ಶಬ್ದ ಕೇಳಿದ ಸುತ್ತಮುತ್ತಲಿನವರು ಎಚ್ಚರಗೊಂಡಿದ್ದಾರೆ. ಮಾಸ್ಕ್ ಧರಿಸಿದ್ದ ದರೋಡೆಕೋರರು ಕೈಯಲ್ಲಿ ಆಯುಧ ಸೇರಿ ಇತರ ಹರಿತ ವಸ್ತುಗಳನ್ನು ಹಿಡಿದುಕೊಂಡಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೀಟ್ ಪೊಲೀಸರು ಬರುತ್ತಿದ್ದಂತೆ ಅಡಗಿ ಕುಳಿತು ನಂತರ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಕೇಶ್ವಾಪುರ ಪೊಲೀಸರು ಈ ಕುರಿತು ಪರಿಶೀಲನೆ ನಡೆಸಿದ್ದು, ಯಾವುದೇ ಗ್ಯಾಂಗ್ ಇತ್ತಕಡೆ ಆಗಮಿಸಿಲ್ಲ ಎಂದು ತಿಳಿಸಿದ್ದಾರೆ.