ಕಸಬಾಪೇಟೆ ಪೊಲೀಸ್ ಠಾಣೆ (attacked) 
ಧಾರವಾಡ

(attacked) ಊಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಬ್ಬೂರ ಸರ್ಕಲ್‌ನ ಕಟ್ಟೆ ಮೇಲೆ ಊಟ ಮಾಡುತ್ತಿದ್ದ ವ್ಯಕ್ತಿಗೆ ಮೂವರು ಸೇರಿ ಹಲ್ಲೆ (attacked) ಮಾಡಿರುವ ಘಟನೆ ನಡೆದಿದೆ.
ವಿಜಯಪುರದ ಇಂಡಿ ಮೂಲದ ರಾಜು ಹೊಸಮನಿ ಎಂಬಾತನಿಗೆ ಹಲ್ಲೆ ಮಾಡಲಾಗಿದೆ. ಇಂಡಿಯಿಂದ ಕೆಲಸ ಅರಸಿ ಹುಬ್ಬಳ್ಳಿಗೆ ಬಂದಿದ್ದು, ಗಬ್ಬೂರ ಸರ್ಕಲ್‌ನಲ್ಲಿ ರಾತ್ರಿ 11.30ರ ಸುಮಾರಿಗೆ ಹೋಟೆಲ್‌ನಿಂದ ತಂದ ಊಟ ಮಾಡುತ್ತಿದ್ದ ವೇಳೆ ಹಲ್ಲೆ ಮಾಡಲಾಗಿದೆ ಎಂದು ರಾಜು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.