attack ಹಲ್ಲೆ ಮಾಡಿರುವ ಘಟನೆ 
ಧಾರವಾಡ

attack ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ

ಹುಬ್ಬಳ್ಳಿ: ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿದ್ದು, ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ attcak ಮಾಡಿರುವ ಘಟನೆ ನವನಗರದಲ್ಲಿ ಇತ್ತೀಚೆಗೆ ನಡೆದಿದೆ.
ನಿಜಗುಣಯ್ಯ, ವೀರಭದ್ರಯ್ಯ, ಸಂಗಯ್ಯ, ಮಹಾಲಿಂಗಯ್ಯ, ಶಿವಣ್ಣ ಎಂಬುವವರ ಮೇಲೆ ಹಲ್ಲೆಯಾಗಿ ಗಾಯಗೊಂಡಿದ್ದಾರೆ.
ಸಂಜೀವ, ರಫೀಕ್, ಅಬ್ದುಲ್, ಹನೀಫ್, ಅಲ್ಲಾಭಕ್ಷ, ಮಣಿಕಂಠ, ಅಜಾದ್ ಸೇರಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುತಗಟ್ಟಿ ವ್ಯಾಪ್ತಿಯಲ್ಲಿ ನಿಜಗುಣಯ್ಯ ಅವರ ಹಾಗೂ ಆರೋಪಿತರ ಹೊಲಗಳಿದ್ದು, ಜಮೀನಿನ ಹಿಸ್ಸಾ ಸಲುವಾಗಿ ಆಗಾಗ ಜಗಳ ನಡೆಯುತ್ತಿತ್ತು.
ಇತ್ತೀಚೆಗ ಹೊಲದಲ್ಲಿ ಬೆಳೆ ಹಾನಿ ಮಾಡಿ ಶೆಡ್ಡಿನ ಬಾಗಿಲು ಮುರಿದು ಆರೋಪಿತರು ಹಾನಿ ಮಾಡಿದ್ದಾರೆ. ಇದಾದ ಬಳಿಕ ನವನಗರದ ಅಂಚೆ ಕಚೇರಿ ಬಳಿ ನಿಜಗುಣಯ್ಯ ಸೇರಿ ಇತರರು ಮನೆಗೆ ಹೋಗುತ್ತಿದ್ದಾಗ, 15 ಜನ ಸೇರಿ ತಂಟೆ ತೆಗೆದು ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಾರೆ ಎಂದು ನವನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.