art mela ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಆದಿವಾಸಿ ದಿನಾಚರಣೆ, ಕಲಾಮೇಳದಲ್ಲಿ ವಿವಿಧ ಜಿಲ್ಲೆಯ ಸಾಧಕರಿಗೆ ಆದಿವಾಸಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಚಿವರಾದ ಸತೀಶ ಜಾರಕಿಹೊಳಿ, ರುದ್ರಪ್ಪ ಲಮಾಣಿ, ಮೇಯರ್​ ದುರ್ಗಮ್ಮ ಬೆಜವಾಡ, ಇತರರು ಇದ್ದರು. 
ಧಾರವಾಡ

art mela ಆದಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಸಚಿವ ಸತೀಶ ಜಾರಕಿಹೊಳಿ ಭರವಸೆ
  • ಹುಬ್ಬಳ್ಳಿಯಲ್ಲಿ ಆದಿವಾಸಿ ದಿನಾಚರಣೆ, ಕಲಾಮೇಳ

ಹುಬ್ಬಳ್ಳಿ: art mela ಆದಿವಾಸಿಗಳ ಹಕ್ಕು ರಕ್ಷಣೆ ಹಾಗೂ ಅವರ ಬೇಕು, ಬೇಡಿಕೆಗಳಿಗೆ ರಾಜ್ಯ ಸರ್ಕಾರ ಪೂರಕವಾಗಿ ಕೆಲಸ ಮಾಡಲಿದೆ, ಸಮುದಾಯದ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹಾರ ಮಾಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್​, ಆದಿವಾಸಿ ಹರಣಶಿಕಾರಿ ಪಾರ್ಥಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ಆದಿವಾಸಿ ಸಮುದಾಯಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ನೆಹರು ಮೈದಾನದಲ್ಲಿ ಏರ್ಪಡಿಸಿದ್ದ 32ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗು ಆದಿವಾಸಿಗಳ ಕಲಾಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಆದಿವಾಸಿಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದಾಗ್ಯೂ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸೌಲಭ್ಯಗಳನ್ನು ಬಳಸಿಕೊಳ್ಳಲು ಸಮುದಾಯದ ಜನರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ತಂದು ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಕಾಲಮಿತಿಯಲ್ಲಿ ಸವಲತ್ತುಗಳನ್ನು ಕೊಡಿಸಲು ನೀಲನಕ್ಷೆ ಸಿದ್ಧಪಡಿಸೋಣ ಎಂದು ಹೇಳಿದರು.

ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಸಮುದಾಯ ಹಿಂದುಳಿದಿದೆ. ಅಗತ್ಯ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಶಾಸಕ ಎನ್​.ಎಚ್​. ಕೋನರಡ್ಡಿ, ಆದಿವಾಸಿ ಸಮುದಾಯವೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಎಲ್ಲರೂ ಕೂಡಿ ಶ್ರಮಿಸೋಣ ಎಂದರು.
ಎಸ್ಸಿಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಮಾತನಾಡಿ, ಆದಿವಾಸಿಗಳು ಅರಣ್ಯದಲ್ಲಿ ವಾಸಿಸುವವರು. ಅವರ ಹಕ್ಕುಗಳನ್ನು ಕಿತ್ತುಕೊಳ್ಳಬಾರದು. ಈ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಪ್ರತಿ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣವಾಗಬೇಕಾಗಿದೆ ಎಂದು ಹೇಳಿದರು.
ಸಂಚಾಲಕ ವಾಸುದೇವ ಕಾಳೆ ಮಾತನಾಡಿ, ಉಪಜೀವನಕ್ಕೆ ಕಾಡಿನಲ್ಲಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದರೆ ನಮ್ಮನ್ನು ಕಳ್ಳರಂತೆ ನೋಡಲಾಯಿತು. ನಮ್ಮ ಮೂಲ ಉದ್ಯೋಗ ಕಿತ್ತುಕೊಳ್ಳಲಾಗಿದೆ. ಕಾಡು ಬಿಟ್ಟರೆ ನಮಗೆ ಜೀವನಾಧಾರವೇ ಇರುವುದಿಲ್ಲ. ಬೇರೆ ಉದ್ಯೋಗವನ್ನಾದರೂ ಸರ್ಕಾರ ಕೊಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ತಳಸಮುದಾಯಗಳ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಆರ್​.ವಿ. ಚಂದ್ರಶೇಖರ ಉಪನ್ಯಾಸ ನೀಡಿದರು. ಎಲ್ಲ ಆದಿವಾಸಿಗಳು ಒಂದು, ನಾವೆಲ್ಲ ಮೂಲಭೂತ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಮೇಯರ್​ ದುರ್ಗಮ್ಮ ಬೆಜವಾಡ, ಕರ್ನಾಟಕ ಜಾನಪದ ವಿವಿ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಮಾನ್ಪಡೆ, ನಿವೃತ್ತ ಡಿಸಿಪಿ ಎಸ್​.ಎಂ. ಪ್ರತಾಪನ್​, ಉಮೇದಸಿಂಗ್​ ರಬಾರಿ, ರುಕ್ಮವ್ವ ಹರಣಶಿಕಾರಿ, ಪರಿಷತ್​ನ ಪ್ರೊ. ಕೆ.ಎಂ. ಮೇತ್ರಿ, ಎಂ. ಕೃಷ್ಣಯ್ಯ, ಕುಮುದಾ ಸುಶೀಲಪ್ಪ, ನಾಗರಾಜು, ಹನುಮಂತು ಜಿಗಳೆ, ಶ್ರೀನಿವಾಸ ಗೌಡಲು ಇತರರು ಇದ್ದರು.