art gallery ಚಿತ್ರಕಲಾವಿದೆ ಗೀತಾ ಖ್ಯಾಡದ ಮಾಹಿತಿ ನೀಡಿದರು. ಮಂಜುನಾಥ ಕರಿಗಾರ, ದೀಪಾ ವೆರ್ಣೇಕರ, ಗುರು ನಾವಳ್ಳಿ ಇದ್ದರು. 
ಧಾರವಾಡ

art gallery ಹುಬ್ಬಳ್ಳಿಯಲ್ಲಿ ದೃಷ್ಟಿ ಕಲಾ ಸೃಷ್ಟಿ

ಪ್ರಮುಖ ಮುಖ್ಯಾಂಶಗಳು

  • ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
  • ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ

ಹುಬ್ಬಳ್ಳಿ:

art gallery

ಇಲ್ಲಿಯ ವಿದ್ಯಾನಗರ ಗುರುದತ್ತ ಭವನ ಎದುರಿನ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಿಗಿ ಕಲಾ ಮಂದಿರದಲ್ಲಿ (ಆರ್ಟ್​ ಗ್ಯಾಲರಿ) ಆ. 23ರಿಂದ 29ರ ವರೆಗೆ ಕಲಾವಿದೆ ಗೀತಾ ಖ್ಯಾಡದ ಅವರ "ದೃಷ್ಟಿ ಕಲಾ ಸೃಷ್ಟಿ' ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕಲಾಮಂದಿರ ಸಮಿತಿ ಕಾರ್ಯದರ್ಶಿ ಎಂ.ಎನ್​. ಕರಿಗಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ. 23ರಂದು ಬೆಳಗ್ಗೆ 11.30ಕ್ಕೆ ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ನಿಕಟಪೂರ್ವ ಮುಖ್ಯಸ್ಥ ಡಾ. ಬಸವರಾಜ ಕುರಿಯವರ ಪ್ರದರ್ಶನ ಉದ್ಘಾಟಿಸುವರು. ದಂತ ವೈದ್ಯೆ ಪ್ರೊ. ಡಾ. ಮಹಿಮಾ ದಂಡ, ನಿವೃತ್ತ ಉಪನ್ಯಾಸಕ ಹಾಗೂ ಕಲಾ ಮಂದಿರ ಸಮಿತಿ ಉಪಾಧ್ಯಕ್ಷ ಎಲ್​.ಸಿ. ಬೆಲ್ಲದ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಕಲಾವಿದೆ ಗೀತಾ ಖ್ಯಾಡದ ಮಾತನಾಡಿ, ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 5.30ರ ವರೆಗೆ ಸಾರ್ವಜನಿಕರಿಗೆ ಉಚಿತವಾಗಿ ಚಿತ್ರಕಲಾ ಪ್ರದರ್ಶನ ವೀಕ್ಷಿಸಲು ಅವಕಾಶ ಇರಲಿದೆ. ನಿಸರ್ಗ, ರೋಬಾಟ್​ ಮುಂತಾದ ವಿಷಯಗಳ ಮೇಲೆ 30ಕ್ಕೂ ಹೆಚ್ಚು ಪೇಂಟಿಂಗ್​ಗಳನ್ನು ಇಲ್ಲಿ ಪ್ರದರ್ಶನ ನೀಡಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ದೀಪಾ ವರ್ಣೇಕರ ಉಪಸ್ಥಿತರಿದ್ದರು.