ಹುಬ್ಬಳ್ಳಿಯಲ್ಲಿ (Art Exhibition) ಆಯೋಜಿಸಿರುವ ಸೃಷ್ಟಿಯ ಸೊಬಗು-ಚಿತ್ರಕಲಾ ಪ್ರದರ್ಶನವನ್ನು ವಾಸ್ತುಶಿಲ್ಪಿ, ಗಾಯಕಿ ವೀಣಾ ಹಾನಗಲ್ ಉದ್ಘಾಟಿಸಿದರು. ಕಲಾವಿದ ಮಂಜುನಾಥ ಕರಿಗಾರ, ಆರ್.ಬಿ. ಗರಗ, ಆರ್.ಎಫ್. ಹಿರೇಗೌಡರ್, ಡಾ. ಬಸವರಾಜ ಸಜ್ಜದ ಇದ್ದರು.  
ಧಾರವಾಡ

ಕಲಾಕೃತಿಗಳನ್ನು (Art Exhibition) ಖರೀದಿಸಿ ಪ್ರೋತ್ಸಾಹಿಸಿ

ಸಂತೋಷ ವೈದ್ಯ

ಕಲಾಕೃತಿಗಳು ಪ್ರದರ್ಶನಕ್ಕೆ

(Art Exhibition)

ಮಾತ್ರ ಸೀಮಿತವಾಗಬಾರದು. ಆಸಕ್ತರು, ಸಾರ್ವಜನಿಕರು ಅವುಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ ಸಮಿತಿ ಅಧ್ಯಕ್ಷ ಆರ್. ಬಿ.ಗರಗ ಹೇಳಿದರು.

ವಿದ್ಯಾನಗರದ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಿಗಿ ಆರ್ಟ್ ಗ್ಯಾಲರಿಯಲ್ಲಿ ಭಾನುವಾರದಿಂದ ಆಯೋಜಿಸಿರುವ ಮಂಜುನಾಥ ಕರಿಗಾರ ಅವರ 9 ದಿನಗಳ ಸೃಷ್ಟಿಯ ಸೊಬಗು-ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇವರು ಈ ಸೃಷ್ಟಿಯನ್ನು ರಚಿಸಿದ್ದಾನೆ. ಸೃಷ್ಟಿಯ ಸೌಂದರ್ಯವನ್ನು ಕಲಾವಿದರಿಗೆ ಮಾತ್ರ ನೈಜವಾಗಿ ಚಿತ್ರಿಸಲು ಸಾಧ್ಯ ಎಂದರು.
ಕಲಾವಿದ ಮಂಜುನಾಥ ಅವರು ಬಹಳ ಪರಿಶ್ರಮದಿಂದ ಚಿತ್ರಕಲೆಯಲ್ಲಿ ಬೆಳೆದು ಬಂದಿದ್ದಾರೆ. ಬೆಂಗಳೂರಿನ ಚಿತ್ರ ಸಂತೆಯಲ್ಲೂ ಅವರ ಕಲಾಕೃತಿಗಳು ಪ್ರದರ್ಶನ ಕಂಡಿವೆ. ಅವರು ಪಟ್ಟು ಹಿಡಿದು ಕೆಲಸ ಮಾಡಿದ ಪರಿಣಾಮ ಮಿಣಜಿಗಿ ಆರ್ಟ್ ಗ್ಯಾಲರಿ ಇಂದು ಸಾಕಷ್ಟು ಸುಧಾರಣೆ ಕಂಡಿದೆ ಎಂದು ಹೇಳಿದರು.
ಉದ್ಘಾಟಿಸಿದ ವಾಸ್ತುಶಿಲ್ಪಿ, ಗಾಯಕಿ ವೀಣಾ ಹಾನಗಲ್ ಮಾತನಾಡಿ, ಚಿತ್ರಕಲಾ ಪ್ರದರ್ಶನ ನೋಡಿ ತುಂಬಾ ಖುಷಿಯಾಗಿದೆ. ಸಮಾಜವು ಕಲಾವಿದರನ್ನು ಪ್ರೋತ್ಸಾಹಿಸಬೇಕು. ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರ್ಕಿಟೆಕ್ಟ್ ಸಂಸ್ಥೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಹುಬ್ಬಳ್ಳಿ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಫ್. ಹಿರೇಗೌಡರ ಮಾತನಾಡಿ, ಸೃಷ್ಟಿಯನ್ನು ನಕಲು ಮಾಡಲು ಸಾಧ್ಯವಿಲ್ಲ. ಕಲಾವಿದನಿಗೆ ಸೃಷ್ಟಿಗೆ ಪ್ರೇರಣೆ ಸ್ಪೂರ್ತಿಯಾಗಿದೆ. ಸೃಷ್ಟಿಯ ಸೊಬಗನ್ನು ಸುಂದರವಾಗಿ ಚಿತ್ರಿಸುವುದು ಕಲಾವಿದನ ಹೆಚ್ಚುಗಾರಿಕೆ. ಕಲಾವಿದ ಮಂಜುನಾಥ ಕರಿಗಾರ ಅವರು ಸೃಷ್ಟಿಯ ಸೊಬಗನ್ನು ಚಿತ್ರಕಲೆಯ ಮೂಲಕ ಅನಾವರಣಗೊಳಿಸಿದ್ದಾರೆ ಎಂದು ಪ್ರಶಂಸಿಸಿದರು.

ಸೃಷ್ಟಿಯ ಸೊಬಗು ಚಿತ್ರಕಲಾ ಪ್ರದರ್ಶನ ಆ. 16ರ ವರೆಗೆ ನಡೆಯಲಿದ್ದು, ನಿತ್ಯ ಬೆಳಗ್ಗೆ 10.30ರಿಂದ ಸಂಜೆ 5.30ರ ವರೆಗೆ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.