ಇಬ್ಬರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು (arrest) ಬಂಧಿಸಿದ್ದಾರೆ
ಹುಬ್ಬಳ್ಳಿ: ತಾಲೂಕಿನ ರೇವಡಿಹಾಳ ಸಮೀಪ ಕಾರ್ ನಿಲ್ಲಿಸಿ ಸುಲಿಗೆ ಮಾಡಿದ್ದ ಇಬ್ಬರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು (arrest) ಬಂಧಿಸಿದ್ದಾರೆ.
ಆಕಾಶ ಅಲಿಯಾಸ್ ಅಂಟ ಆಕಾಶ ಸಿಂಗನಹಳ್ಳಿ, ರಾಜು ಅಲಿಯಾಸ್ ರಾಜಶೇಖರ ಪಾವಟೆ ಬಂಧಿತರು. ಬಂಧಿತರಿಂದ 35 ಗ್ರಾಂ, ಬಂಗಾರದ ಚೈನ್, 4500 ರೂ. ನಗದು, ಬಜಾಜ್ ಪ್ಲಾಟಿನಾ ಬೈಕ್ ಸೇರಿ ಒಟ್ಟು 5.80 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.