ಕೊಲೆ ಆರೋಪಿಗಳ ಬಂಧನ (arrest) 
ಧಾರವಾಡ

(arrest) ಮೂವರು ಕೊಲೆ ಆರೋಪಿಗಳ ಬಂಧನ

ಹುಬ್ಬಳ್ಳಿ: ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ನಡೆದಿದ್ದ ಗರ್ಭಿಣಿ ಮಾನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು (arrest) ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗುರುಸಿದ್ದಗೌಡ ಪಾಟೀಲ, ಫಕೀರಗೌಡ ಪಾಟೀಲ, ಬಸನಗೌಡ ಪಾಟೀಲ ಬಂಧಿತರು. ಇದಕ್ಕೂ ಮೊದಲು ಮೂವರು ಸೇರಿದಂತೆ ಇದುವರೆಗೆ ಒಟ್ಟು 6 ಜನರನ್ನು ಬಂಧಿಸಿದಂತಾಗಿದೆ. ಒಟ್ಟು 14 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ನೇತೃತ್ವದಲ್ಲಿ ತನಿಖೆ ಮತ್ತು ಬಂಧನ ಕಾರ್ಯ ಚುರುಕುಗೊಂಡಿದೆ.
ಇನಾಂವೀರಾಪೂರ ಗ್ರಾಮದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ವಿವೇಕಾನಂದ ದೊಡ್ಡಮನಿ ಅವರಿಗೆ ಹಾಗೂ ಕುಟುಂಬದವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಗಾಯಾಳುಗಳಿರುವ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿಯೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.