ಸುವರ್ಣ ಕಲ್ಲಕುಂಟ್ಲ ಬಂಧನ (arrest) 
ಧಾರವಾಡ

(arrest) ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಬಂಧನ

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಕುಂಟ್ಲಾ ಅವರನ್ನು ಪೊಲೀಸರು ಗುರುವಾರ ವಶಕ್ಕೆ (arrest) ಪಡೆಯಲು ಹೋದಾಗ ಕುಸಿದು ಬಿದ್ದಿದ್ದರು. ಆರೋಗ್ಯ ಅಸ್ತವ್ಯಸ್ತವಾದ್ದರಿಂದ ಇಲ್ಲಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಲಿಕೆ ಸದಸ್ಯೆ ಸುವರ್ಣ ಕಲ್ಕುಂಟ್ಲ ಸೇರಿ 9 ಜನರು ಕ್ಷುಲ್ಲಕ ಕಾರಣಕ್ಕೆ ನಮ್ಮ ಅಕ್ಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು ಎಂದು ಸುಜಾತ ಹಂಡಿ ಸಹೋದರ ಮರಿಯಾದಾಸ್ ಬುಧವಾರ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೇಶ್ವಾಪುರ ಪೊಲೀಸರು ದೂರು ಆಧರಿಸಿ ಸುವರ್ಣ ಕಲ್ಕುಂಟ್ಲ ಅವರನ್ನು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.