ಕೊಲೆಗೈದಿದ್ದ ಮೂವರ ಬಂಧನ (arrest) 
ಧಾರವಾಡ

(arrest) ಕೊಲೆಗೈದಿದ್ದ ಮೂವರ ಬಂಧನ

ಮರಿದೇವ ಹೂಗಾರ
ಹುಬ್ಬಳ್ಳಿ: ಉಪ ಗುತ್ತಿಗೆದಾರನ ಕೊಲೆ (arrest) ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ನವನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಛತ್ತಿಸಗಡ ಮೂಲದ ಮೇಘವ ಸತನಾಮಿ (50), ಭಗವಾನ್‌ದಾಸ ಸತನಾಮಿ (21), ವಿಮಲಾ ಸತನಾಮಿ (40) ಬಂಧಿತರು. ವಿಜಯಪುರ ಮೂಲದ ವಿಠ್ಠಲ ರಾಥೋಡ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕೆ ಕಾನೂನು ವಿಶ್ವವಿದ್ಯಾಲಯ ಹತ್ತಿರದ ಕಟ್ಟಡದ ಬಳಿ ಕೊಲೆ ಮಾಡಿದ್ದರು ಎಂಬುದು ಪೊಲೀಸರ ಪರಿಶೀಲನೆಯಿಂದ ಬಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.