army felicitation ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಭಾರತೀಯ ಸೈನಿಕರನ್ನು ಸನ್ಮಾನಿಸಲಾಯಿತು. ಬಿಜೆಪಿ ಮುಖಂಡ ಸಂಕಲ್ಪ ಶೆಟ್ಟರ್, ನಾಗೇಶ, ಶಿವಕುಮಾರ ಕೊಪ್ಪದ, ಮಂಜುನಾಥ ನಾಗರಾಳ, ಭಾರತಿ ಟಪಾಲ್, ವಿನೋದ್ ಬಂಕಾಪುರ, ಮಾಂತೇಶ ನಾಶಿ, ಇತರರು ಇದ್ದರು.
ಹುಬ್ಬಳ್ಳಿ: army felicitation ಭೈರಿದೇವರಕೊಪ್ಪದಲ್ಲಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಹಾಗೂ ಹಾಲಿ ಭಾರತೀಯ ಸೈನಿಕರನ್ನು ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು.
ಬಿಜೆಪಿ ಮುಖಂಡ ಸಂಕಲ್ಪ ಶೆಟ್ಟರ್ ಅವರು ಯೋಧರನ್ನು ಶಾಲು ಹೊದಿಸಿ, ಹೆಮ್ಮೆಯ ರಾಷ್ಟ್ರಧ್ವಜ ನೀಡಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅವರು, ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಸೇವೆ ಸಲ್ಲಿಸಿರುವ ಯೋಧರ ತ್ಯಾಗ, ಶೌರ್ಯ ಮತ್ತು ದೇಶಭಕ್ತಿಯನ್ನು ಪ್ರತಿಯೊಬ್ಬ ಭಾರತೀಯರೂ ಸದಾ ಸ್ಮರಿಸಬೇಕು. ಕಾರ್ಗಿಲ್ ವಿಜಯ ದಿವಸವು ನಮ್ಮ ಸೈನಿಕರ ಅಮೋಘ ಪರಾಕ್ರಮದ ಸಂಕೇತವಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 136ನೇ "ಮನ್ ಕಿ ಬಾತ್' ಕಾರ್ಯಕ್ರಮವನ್ನು ಸಾರ್ವಜನಿಕರು ಹಾಗೂ ಗಣ್ಯರೊಂದಿಗೆ ವೀಕ್ಷಿಸಲಾಯಿತು.
ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಶಿವಕುಮಾರ ಕೊಪ್ಪದ, ಮಂಜುನಾಥ ನಾಗರಾಳ, ಭಾರತಿ ಟಪಾಲ್, ವಿನೋದ್ ಬಂಕಾಪುರ, ಮಾಂತೇಶ ನಾಶಿ, ಕೊಪ್ಪದ ಅವರ ಕುಟುಂಬಸ್ಥರು, ಗೆಳೆಯರ ಬಳಗ ಹಾಗೂ ಭೈರಿದೇವರಕೊಪ್ಪದ ಗುರುಹಿರಿಯರು ಮತ್ತು ಸ್ಥಳಿಯರು ಉಪಸ್ಥಿತರಿದ್ದು, ಯೋಧರಿಗೆ ಅಭಿನಂದನೆ ಸಲ್ಲಿಸಿದರು.