appeal ಹಳೇ ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪುಷ್ಕರಣಿ ರಕ್ಷಣೆಗೆ ಆಗ್ರಹಿಸಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಲಾಯಿತು.
- ದೇವಸ್ಥಾನ ಸುತ್ತಲಿನ 100 ಮೀಟರ್ ಜಾಗ ನಿಷೇಧಿತ ಪ್ರದೇಶ
- ವೈಜ್ಞಾನಿಕವಾಗಿ ಸರ್ವೆ ಮಾಡಿಸಬೇಕು.
- ಹೊಂಡ ಎಂದು ನಮೂದಿಸಿದ ಜಾಗವನ್ನು ಉತ್ಖನನ ಮಾಡಿಸಬೇಕು.
1823-24ನೇ ಇಸ್ವಿಯ ಬಾಂಬೆ ಗೆಜೆಟ್ನಲ್ಲಿಯೇ ಪುಷ್ಕರಣಿ ಇರುವ ಬಗ್ಗೆ ಉಲ್ಲೇಖ ಇದೆ. ಈ ದೇವಸ್ಥಾನ ಹಾಗೂ ಪುಷ್ಕರಣಿ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತದೆ.
ದೇವಸ್ಥಾನ ಸುತ್ತಲಿನ 100 ಮೀಟರ್ ಜಾಗ ನಿಷೇಧಿತ ಪ್ರದೇಶವಾಗಿದ್ದು, ಅಲ್ಲಿ ಯಾವುದೇ ರಿಪೇರಿ, ನಿರ್ವಣ, ಗಣಿಗಾರಿಕೆ ಕೈಗೊಳ್ಳದಂತೆ ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ.
ಆದರೆ, ಮಹಾನಗರ ಪಾಲಿಕೆ ಆಯುಕ್ತರು ಆ ಜಾಗದಲ್ಲಿ ರಸ್ತೆ ನಿರ್ವಿುಸಲು ಕಾರ್ಯಾದೇಶ ನೀಡಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಅರ್ಧ ರಸ್ತೆ ಕಾಮಗಾರಿ ಮುಗಿದಿದ್ದು, ರಸ್ತೆ ತೆರವುಗೊಳಿಸಬೇಕು. ರಸ್ತೆಗೆ ಮಾಡಿದ ವೆಚ್ಚವನ್ನು ಪುರಾತತ್ವ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಅಥವಾ ಸಂಬಂಧಿಸಿದ ಅಧಿಕಾರಿಗಳಿಂದ ಭರಿಸಬೇಕು ಎಂದು ಒತ್ತಾಯಿಸಿದರು.
ದೇವಸ್ಥಾನ ಸುತ್ತಲಿನ 200 ಮೀಟರ್ ಜಾಗವನ್ನು ವೈಜ್ಞಾನಿಕವಾಗಿ ಸರ್ವೆ ಮಾಡಿಸಬೇಕು. ಹೊಂಡ ಎಂದು ನಮೂದಿಸಿದ ಜಾಗವನ್ನು ಉತ್ಖನನ ಮಾಡಿಸಬೇಕು. ದೇವಸ್ಥಾನದ ಗಡಿ ಗುರುತಿಸಿ, ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ಡಾ. ಮಹೇಶ ನಾಲವಾಡ, ಸುಧಾಕರ ಶೆಟ್ಟಿ, ಯಶೋಧಾ ತಾಂಬೆ, ಆನಂದ ಬೆಲಕರ, ರಾಘವೇಂದ್ರ ಮೆಹರವಾಡೆ ಈ ಸಂದರ್ಭದಲ್ಲಿ ಹಾಜರಿದ್ದರು.