ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ (arrest) ಆಗ್ರಹಿಸಿ ಸಹೋದರ ಮೈನುದ್ದೀನ ಆದಂಬೈ, ನವನಗರದ ಹು-ಧಾ ಪೊಲೀಸ್ ಆಯುಕ್ತಾಲಯದಲ್ಲಿ ಆಯುಕ್ತ ಎನ್. ಶಶಿಕುಮಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. 
ಧಾರವಾಡ

arrest ಕೊಲೆ ಆರೋಪಿಗಳ ಬಂಧನಕ್ಕೆ ಮನವಿ

ಹುಬ್ಬಳ್ಳಿ: ಮಂಟೂರ್ ರೋಡ್ ಬಳಿ ನಡೆದಿದ್ದ ಮಲ್ಲಿಕಜಾನ್ ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಸ್ಥಳೀಯ ಕೆಲ ನಿವಾಸಿಗಳು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ನವನಗರ ಹು-ಧಾ ಪೊಲೀಸ್ ಆಯುಕ್ತಾಲಯದಲ್ಲಿ ಗುರುವಾರ ಮನವಿ ಸಲ್ಲಿಸಿದರು.
ನನ್ನ ಸಹೋದರ ಮಲ್ಲಿಕಜಾನ್ ಆದಂಬೈ ಅವರನ್ನು ನ. 13ರಂದು ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಬಂಗಾರ ಬಾಲ್ಯಾ, ಪ್ರಜುಲ, ಆಕೀಬ್, ಮಹಮ್ಮದ್, ಸನಿ, ಆಟೂಬಟಾ, ಗೋಪಿ, ಶಾಮ ಜಾಧವ, ರವಿ ಜಾಧವ, ಅಭಿಷೇಕ ಜಾಧವ, ಗಣೇಶ ಜಾಧವ, ಗಿರಿಯಪ್ಪ, ಕಿರಣ ಬಡಿಗೇರ, ಶುಭಂ ಬಿಜವಾಡ, ಗಡಗಿ ಚಂದರ‌್ಯಾ, ಚರಣ ಮತ್ತಿಗತ್ತಿ, ವಿಶಾಲ, ಹಶವತ್ತ, ಕಾಗಿ (ಅಖಿಲ) ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಮನವಿಯನ್ನು ಮೈನುದ್ದೀನ ಆದಂಬೈ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಆಯುಕ್ತ ಎನ್. ಶಶಿಕುಮಾರ, ಸೂಕ್ತವಾಗಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುವ ಭರವಸೆ ನೀಡಿದರು.