ಆಂಜನೇಯಸ್ವಾಮಿ ಉತ್ಸವದ ಮೆರವಣಿಗೆಗೆ ಚಾಲನೆ 
ಧಾರವಾಡ

ಆಂಜನೇಯಸ್ವಾಮಿ ಉತ್ಸವದ ಮೆರವಣಿಗೆ

ಮಂಜುನಾಥ ಅಂಗಡಿ
ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಯದಲ್ಲಿ ಇತ್ತೀಚೆಗೆ ಹನುಮ ಜಯಂತಿ ಮಹೋತ್ಸವದ ಹಮ್ಮಿಕೊಳ್ಳಲಾಗಿತ್ತು. ಆಂಜನೇಯಸ್ವಾಮಿ ಉತ್ಸವದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜನಪದ ವಾದ್ಯ-ಮೇಳಗಳು ಹಾಗೂ ಮಹಿಳೆಯರ ಕುಂಭಗಳೊಂದಿಗೆ ಸಂಭ್ರಮದಿಂದ ಜರುಗಿತು.
ಉತ್ಸವದ ಪ್ರಮುಖ ಆಕರ್ಷಣೆಯಾಗಿ ವಿದ್ಯುತ್​ ಚಾಲಿತ ಕೃತಕ ಆನೆ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯಿತು. ಅಮ್ಮಿನಬಾವಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಶ್ರೀ ನಾರಾಯಣಗುರು ಸ್ವಾಮೀಜಿ ಹಾಗೂ ಶ್ರೀ ಸಿದ್ಧಾರೂಢಮಠದ ನಾಗೇಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ಮಾಜಿ ಸೈನಿಕರಾದ ರಾಮಣ್ಣ ಕೋಳಿ, ಲಕ್ಷಣ ಜುನ್ನಾಯ್ಕರ, ಅರ್ಜುನ ನೀರಲಕಟ್ಟಿ, ವಜಿಹಾದೇವ ಪತ್ತಾರ, ಶಂಕರ ಚಿಕ್ಕನರಗುಂದ, ವಿವಿಧ ಸಮಾಜಗಳ ಗಣ್ಯರಾದ ಚೆನ್ನಯ್ಯ ಹಿರೇಮಠ, ದೇವಾಲಯದ ಪ್ರಧಾನ ಅರ್ಚಕ ಶ್ರೀಕಾಂತ ಪದಕಿ, ಮಲ್ಲಪ್ಪ ಕುಸುಗಲ್ಲ, ಶಿವಾಜಿ ಕಲಾಲ, ವಸಂತ ಪದಕಿ, ರಾಮು ದೇಶಪಾಂಡೆ ಹಾಗೂ ಗ್ರಾಮದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.