ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್​ (Congress) ಆಡಳಿತದ ಬಗ್ಗೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ 
ಧಾರವಾಡ

(Congress) ಭಿನ್ನಮತ ಇಲ್ಲವೆಂದು ತೋರಿಸಿಕೊಳ್ಳುವ ಯತ್ನ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಿದ್ದಾರೆ.
  • ದಲಿತ ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ.
  • ಎಐಸಿಸಿ ಅಧ್ಯಕ್ಷ ಹುದ್ದೆ ಹೈಕಮಾಂಡ್ ಸ್ಥಾನಕ್ಕೆ ಕಡಿಮೆ ಇಲ್ಲ ಎಂಬುದನ್ನು ಖರ್ಗೆ ಮರೆತಂತಿದೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಒಟ್ಟಿಗೆ ಸೇರಿ ಬ್ರೆಕ್ ಫಾಸ್ಟ್ ಮಾಡುವ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲವೆಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನೊಂದೆಡೆ, ಗೃಹ ಸಚಿವ ಪರಮೇಶ್ವರ ಮತ್ತು ಸಚಿವ ಸತೀಶ ಜಾರಕಿಹೊಳಿ ಅವರು ಡಿನ್ನರ್ ಮೀಟಿಂಗ್ ಮಾಡುವ ಮೂಲಕ ದಲಿತ ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ರಾಜ್ಯಕ್ಕೆ ಬಂದಾಗ ಸೂಟ್​ಕೇಸ್ ನಿರೀಕ್ಷಿಸುತ್ತಿರುವ ಅವರು, ರಾಜ್ಯದಲ್ಲಿ ಉದ್ಭವಿಸಿರುವ ಸಿಎಂ ಕುರ್ಚಿ ವಿವಾದದ ಬಗೆಹರಿಸುವುದರತ್ತ ಎಳ್ಳಷ್ಟೂ ಗಮನ ಹರಿಸುತ್ತಿಲ್ಲ ಎಂದರು.
ಕಾಂಗ್ರೆಸ್​ನಲ್ಲಿ ಗಾಂಧಿ ಕುಟುಂಬ ಹೊರತುಪಡಿಸಿ ಬೇರೆ ಯಾವುದೇ ನಾಯಕರಿಗೆ ಬೆಲೆ ಇಲ್ಲ ಎಂಬುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಕ್ಷಿ. ಮುಖ್ಯಮಂತ್ರಿ ಕುರ್ಚಿ ವಿವಾದ ಬಗೆಹರಿಸುವುದನ್ನು ಬಿಟ್ಟು, ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂಬ ಅವರ ಹೇಳಿಕೆ ಅಚ್ಚರಿ ಮೂಡಿಸುವಂತಿದೆ. ಎಐಸಿಸಿ ಅಧ್ಯಕ್ಷ ಹುದ್ದೆ ಹೈಕಮಾಂಡ್ ಸ್ಥಾನಕ್ಕೆ ಕಡಿಮೆ ಇಲ್ಲ ಎಂಬುದನ್ನು ಖರ್ಗೆ ಅವರು ಮರೆತಂತಿದೆ ಎಂದು ಹೇಳಿದರು.