amnesty schemes ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮ್ಮೇಳನದಲ್ಲಿ ಪಿಎಫ್ ಅಧಿಕಾರಿಗಳಾದ ಜಯಕುಮಾರ್, ಅಶುತೋಷ್.
- ಪಿಎಫ್ ಕಚೇರಿಯಲ್ಲಿ ಜಾಗೃತಿ ಸಮ್ಮೇಳನ
- ಯೋಜನೆಯ ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುವುದು
ಹುಬ್ಬಳ್ಳಿ: amnesty schemes ಇಲ್ಲಿಯ ನವನಗರದ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಪ್ರಾದೇಶಿಕ ಕಚೇರಿಯಲ್ಲಿ ಉದ್ಯೋಗದಾತರು, ಕೈಗಾರಿಕೆಗಳು, ವಾಣಿಜ್ಯ ಮಂಡಳಿಗಳು, ಕಾರ್ಮಿಕ ಸಲಹೆಗಾರರು ಮತ್ತು ಎಚ್ಆರ್ ವೃತ್ತಿಪರರಿಗೆ ಜಾಗೃತಿ ಸಮ್ಮೇಳನ ಶುಕ್ರವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಗೋವಾ- ಕರ್ನಾಟಕ ವಲಯದ ಕೇಂದ್ರ ಭವಿಷ್ಯ ನಿಧಿ ಹೆಚ್ಚುವರಿ ಆಯುಕ್ತ ಜಯಕುಮಾರ್, ಯೋಜನೆಯ ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುವುದು, ಅರ್ಹ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ವಿಸ್ತರಿಸುವುದು.
ಉದ್ಯೋಗದಾತರು ನಿಗದಿತ ಅವಧಿಯೊಳಗೆ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಹುಬ್ಬಳ್ಳಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಅಶುತೋಷ್ ಮಾತನಾಡಿ, ಉದ್ಯೋಗ ಸಂಘಟನೆಗಳ ಪ್ರತಿನಿಧಿಗಳು ಯೋಜನೆಗಳ ಪ್ರಯೋಜನಗಳನ್ನು ತಮ್ಮ ವ್ಯಾಪ್ತಿಯಲ್ಲಿರುವ ಉದ್ಯೋಗಿಗಳಿಗೆ ತಲುಪಿಸುವಂತೆ ಮನವಿ ಮಾಡಿದರು.
ಸಂವಾದದಲ್ಲಿ ಕೆಸಿಸಿಐ ಉಪಾಧ್ಯಕ್ಷ ಸಿದ್ದೇಶ್ವರ ಕಮ್ಮಾರ, ನಂದೀಶ ಎಸ್.ಎ., ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಶಶಿಕುಮಾರ ಇತರರು ಭಾಗವಹಿಸಿದ್ದರು.
ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಉದ್ಯೋಗದಾತರು, ಎಚ್ಆರ್ ವೃತ್ತಿಪರರು, ಕೈಗಾರಿಕೆಗಳು, ವಾಣಿಜ್ಯ ಮಂಡಳಿ ಮತ್ತು ಕಾರ್ಮಿಕ ಸಲಹೆಗಾರರು ಪಾಲ್ಗೊಂಡಿದ್ದರು.