ambedkar jayanti ಹುಬ್ಬಳ್ಳಿಯ ಹೆಗ್ಗೇರಿ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಂಬೇಡ್ಕರ್​ ಜಯಂತಿ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು. ವಿಠ್ಠಲ ಬೆಣಗಿ, ಗುರುನಾಥ ಉಳ್ಳಿಕಾಶಿ, ಮಹೇಶ ದಾಬಡೆ, ವಿಜಯಕುಮಾರ, ಗಿರೀಶ ತಳವಾರ, ವೀರೇಶ ಸಬರದ, ಇತರರು ಇದ್ದರು. 
ಧಾರವಾಡ

ambedkar jayanti ಸರ್ವರ ಹಿತ ಕಾಪಾಡಿದ ಶ್ರೇಷ್ಠ ನಾಯಕ

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್​ ಜಯಂತಿ ಉದ್ಘಾಟಿಸಿದ ಶಾಸಕ ಟೆಂಗಿನಕಾಯಿ ಅಭಿಮತ
ಹುಬ್ಬಳ್ಳಿ: ambedkar jayanti ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್​ ಅವರು ಸಂವಿಧಾನ ರಚನೆ ಮಾಡುವ ಮೂಲಕ ಸರ್ವ ಜನರ ಹಿತ ಕಾಪಾಡಿದ ಶ್ರೇಷ್ಠ ನಾಯಕರು, ಅವರು ತಮ್ಮ ಜೀವನವನ್ನು ಸಮಾಜಕ್ಕಾಗಿಯೇ ಸಂಪೂರ್ಣ ಅರ್ಪಿಸಿಕೊಂಡವರು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿಯ ಹೆಗ್ಗೇರಿ ಡಾ. ಬಿ.ಆರ್​. ಅಂಬೇಡ್ಕರ ಕ್ರೀಡಾಂಗಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್​ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮಾತ್ರವಲ್ಲ, ಎಲ್ಲ ಸಮುದಾಯದ ಏಳ್ಗೆಗಾಗಿ ದುಡಿದವರು. ಜಗತ್ತಿಗೆ ಶ್ರೇಷ್ಠವಾದ ಸಂವಿಧಾನವನ್ನು ನಮಗೆ ಕೊಟ್ಟರು. ಅವರು ಸಂವಿಧಾನ ರಚನಾ ಸಮಿತಿಯಲ್ಲಿ ಇಲ್ಲದೇ ಹೋಗಿದ್ದರೆ ನಮ್ಮ ಸಂವಿಧಾನ ಇಷ್ಟೊಂದು ಅತ್ಯದ್ಭುತವಾಗಿ ಇರುತ್ತಿರಲಿಲ್ಲ. ಚಹಾ ಮಾರುತ್ತಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ವಿಠ್ಠಲ ಬೆಣಗಿ ಉಪನ್ಯಾಸ ನೀಡಿದರು.
ಮುಖಂಡರಾದ ಗುರುನಾಥ ಉಳ್ಳಿಕಾಶಿ, ಮಹೇಶ ದಾಬಡೆ, ಸಂಜೀವ ದುಮ್ಮಕನಾಳ, ಪಾಲಿಕೆ ಇಂಜಿನಿಯರ್​ ವಿಜಯಕುಮಾರ, ಗಿರೀಶ ತಳವಾರ, ವೀರೇಶ ಸಬರದ, ಗುರುಸಿದ್ಧ ಅಂಗಡಿ, ಲೋಹಿತ ಗಾಮನಗಟ್ಟಿ, ಉಮೇಶ ಸವಣೂರ ಇತರರಿದ್ದರು.

ಪುಷ್ಪಗೌರವ