Mahesh Shetti 
ಧಾರವಾಡ

ಆಳ್ವಾಸ್​ ವಿರಾಸತ್​ ಸಾಂಸ್ಕೃತಿಕ ಸಂಭ್ರಮೋತ್ಸವ

ಧಾರವಾಡ: ಆಳ್ವಾಸ್​ ವಿರಾಸತ್​ ಸಾಂಸ್ಕೃತಿಕ ಸಂಭ್ರಮೋತ್ಸವವನ್ನು ಫೆ. 21ರಂದು ಸಂಜೆ 5.30ಕ್ಕೆ ನಗರದ ಕರ್ನಾಟಕ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಧಾರವಾಡ ಹೊಟೆಲ್​ ಮತ್ತು ಬೇಕರಿ ಒಡೆಯರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೂಡಬಿದಿರೆಯ ಆಳ್ವಾಸ್​ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್​ ನುಡಿಸಿರಿ ವಿರಾಸತ್​ ಘಟಕ, ಧಾರವಾಡ ಹಾಗೂ ಧಾರವಾಡ ಹೊಟೆಲ್​ ಒಡೆಯರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾತ್ಮಕ ಯೋಗ, ಶಾಸ್ತ್ರೀಯ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್​ ಡ್ಯಾನ್ಸ್​, ಗುಜರಾತ್​ನ ಗಾರ್ಬಾ ಮತ್ತು ದಾಂಡಿಯಾ, ಮಲ್ಲಕಂಬ ಮತ್ತು ರೋಪ್​ ಕಸರತ್ತು, ಸೃಜನಾತ್ಮಕ ನೃತ್ಯ, ಕಥಕ್​ ನೃತ್ಯ, ಪುರುಲಿಯಾ ಸಿಂಹ ನೃತ್ಯ ಸಾಂಸತಿಕ ವೈಭವದ ವಿಶೇಷತೆಗಳಾಗಿವೆ ಎಂದರು.
ಅಂದು ಸಂಜೆ 5.30ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂಭ್ರಮೋತ್ಸವಕ್ಕೆ ಚಾಲನೆ ನೀಡುವರು. ಸಚಿವ ಸಂತೋಷ ಲಾಡ್​ ಉಪಸ್ಥಿತರಿರುವರು. ಶಾಸಕರಾದ ಅರವಿಂದ ಬೆಲ್ಲದ, ಎನ್​.ಎಚ್​. ಕೋನರಡ್ಡಿ, ಮೇಯರ್​ ಜ್ಯೋತಿ ಪಾಟೀಲ, ಉಪ ಮೇಯರ್​ ಸಂತೋಷ ಚವ್ಹಾಣ, ಜಿಲ್ಲಾಧಿಕಾರಿ ಸ್ನೇಹಲ್​ ಆರ್​., ರಾಜ್ಯ ಹೋಟೆಲ್​ಗಳ ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ, ಆಳ್ವಾಸ್​ ಎಜ್ಯುಕೇಶನ್​ ಟ್ರಸ್ಟ್​ ಅಧ್ಯಕ್ಷ ಮೋಹನ ಆಳ್ವ, ಎಸ್​ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದರು.
ಹುಬ್ಬಳ್ಳಿ- ಧಾರವಾಡ ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ, ಹೋಟೆಲ್​ ಒಡೆಯರ ಸಂಘದ ಕಾರ್ಯದಶಿರ್ ಪ್ರದಿಪ ಪಕ್ಕಳ, ಉಪಾಧ್ಯಕ್ಷ ಸುರೇಶ ಹೆಗಡೆ, ರಾಧಾಕೃಷ್ಣ ಶೆಟ್ಟಿ , ಗೋವರ್ಧನ ಭಟ್​ ಸುದ್ದಿಗೋಷ್ಠಿಯಲ್ಲಿದ್ದರು.