ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಪತ್ರಕರ್ತ ರವೀಂದ್ರ ಜೋಶಿ ವಿರಚಿತ ‘ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್’ (ajit doval)ಕೃತಿಯನ್ನು ಹುಬ್ಬಳ್ಳಿಯಲ್ಲಿ ಶನಿವಾರ ಬಿಡುಗಡೆಗೊಳಿಸಿದರು. 
ಧಾರವಾಡ

(ajit doval) ದೇಶದ ಹಿತಾಸಕ್ತಿ ಗಮನ ಸೆಳೆವ ಪುಸ್ತಕ

ಹುಬ್ಬಳ್ಳಿ: ಪತ್ರಕರ್ತ ರವೀಂದ್ರ ಜೋಶಿ ಬರೆದಿರುವ ‘ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್’ (ajit doval)ಕೃತಿಯನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಶನಿವಾರ ಬಿಡುಗಡೆಗೊಳಿಸಿದರು.
ಇಲ್ಲಿಯ ಬೈಲಪ್ಪನವರ ನಗರದ ಪೇಬಲ್ಸ್ ಬೈ ಡೋಪೇಜ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಡಾ. ವಿಜಯ ಸಂಕೇಶ್ವರ ಅವರು, ಓದುವ ಅಭಿರುಚಿ ಕಡಿಮೆಯಾಗುತ್ತಿರುವ ದಿನಗಳಲ್ಲಿ ರವೀಂದ್ರ ಜೋಶಿ ಅವರು ಹೊಸ ಸಾಹಸ ಮಾಡಿದ್ದಾರೆ. ಇದಕ್ಕೆ ಸಾಹಿತ್ಯ ಪ್ರಕಾಶನ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ಅವರು ಸಾಥ್ ನೀಡಿದ್ದಾರೆ. ಪುಸ್ತಕ ಚಿಕ್ಕದಾದರೂ ಸಂಗ್ರಹಯೋಗ್ಯ ಹಾಗೂ ದೋವಲ್ ಸಾಹಸದ ಕುರಿತ ಪುಸ್ತಕವಿದು ಎಂದರು.
ಚೆಂದದ ಭಾಷೆ ಬಳಕೆಯಾಗಿದೆ. ಖಡಕ್ ಮತ್ತು ನಿರ್ಭೀಡೆ ಬರವಣಿಗೆ ಇದೆ. ದೇಶದ ಹಿತಾಸಕ್ತಿ ಬಗ್ಗೆ ಗಮನ ಸೆಳೆದಿದ್ದಾರೆ. ಬರೆಯುವವರೂ ಕಡಿಮೆಯಾಗಿದ್ದಾರೆ. ರವೀಂದ್ರ ಜೋಶಿ ಅವರ ಬರವಣಿಗೆ ಅದ್ಭುತವಾಗಿ ಮೂಡಿ ಬಂದಿದೆ. ಈ ಪುಸ್ತಕ ಓದುವ ಅಭಿರುಚಿ ಬೆಳೆಸುತ್ತದೆ ಎಂದರು.
ಪುಸ್ತಕ ಕರ್ತೃ ರವೀಂದ್ರ ಜೋಶಿ ಮಾತನಾಡಿ, ಡಾ. ವಿಜಯ ಸಂಕೇಶ್ವರ ಅವರು ಪುಸ್ತಕ ಬಿಡುಗಡೆ ಮಾಡಬೇಕೆಂಬ ಇಚ್ಛೆ ಇತ್ತು. ಅವರು ಪುಸ್ತಕ ಬಿಡುಗಡೆಗೆ ಒಪ್ಪಿ ಲೋಕಾರ್ಪಣೆ ಮಾಡಿದ್ದಾರೆ. ಇದು ನನಗೆ ಸಂತಸದ ದಿನ. ರಾಜಕಾರಣಿ ಅಲ್ಲದಿದ್ದರೂ ಅಜಿತ್ ದೋವಲ್ ಅವರು ದೇಶದ ಹಿತಾಸಕ್ತಿಗಾಗಿ ದುಡಿಯುತ್ತಿದ್ದಾರೆ. ಈ ಕುರಿತಾದ ವಿಸ್ತೃತ ಬರಹ ಪುಸ್ತಕದಲ್ಲಿ ಇದೆ ಎಂದರು.
ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ಮಾತನಾಡಿ, ಪತ್ರಕರ್ತ ರವೀಂದ್ರ ಜೋಶಿ ಅವರು ಅಜಿತ್ ದೋವಲ್ ಕುರಿತು ಬರೆದ ಪ್ರತಿಯನ್ನು ನನ್ನ ಕೈಗಿಟ್ಟರು. ಇದನ್ನು ಪ್ರಕಟಿಸಿದ ಮೊದಲ ಆವೃತ್ತಿಯ ಪುಸ್ತಕಗಳು ಮಾರಾಟವಾದವು. ಇದು ಎರಡನೇ ಆವೃತ್ತಿ. ಈ ಪುಸ್ತಕ ಅಪಾರ ಪ್ರಮಾಣದಲ್ಲಿ ಓದುಗರ ಮೆಚ್ಚುಗೆ ಗಳಿಸಿದೆ ಎಂದರು.
ಪೇಬಲ್ಸ್ ಬೈ ಡೋಪೇಜ್ ಮಾಲೀಕ ಋತ್ವಿಕ್ ಸುಬ್ರಹ್ಮಣ್ಯ ಇತರರಿದ್ದರು.