ಬಾಂಗ್ಲಾದೇಶದಲ್ಲಿ (AHP Protest) ನಡೆಯುತ್ತಿರುವ ಹಿಂದೂಗಳ ಹತ್ಯೆ ಖಂಡಿಸಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗದಳ ಸಂಘಟನೆ ವತಿಯಿಂದ ಹುಬ್ಬಳ್ಳಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. 
ಧಾರವಾಡ

ಹಿಂದೂಗಳ ಹತ್ಯೆ(AHP Protest) ಖಂಡಿಸಿ ಪ್ರತಿಭಟನೆ

ಸಂತೋಷ ವೈದ್ಯ
ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ (AHP Protest) ನಡೆಯುತ್ತಿರುವ ಹಿಂದೂಗಳ ಹತ್ಯೆ ತಡೆಯಲು ಭಾರತ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗದಳ ಸಂಘಟನೆ ವತಿಯಿಂದ ಹುಬ್ಬಳ್ಳಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿ ಸ್ಟೇಷನ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಯನ್ನು ಖಂಡಿಸಿದರು. ಬಾಂಗ್ಲಾದೇಶದ ಪ್ರಧಾನಿ ಮೊಹಮ್ಮದ್ ಯೂನುಸ್ ಪ್ರತಿಕೃತಿ ದಹಿಸಿದರು.
ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಜೀವಕ್ಕೆ ಅಪಾಯವಿದೆ. ಜಿಹಾದಿ ಮನಸ್ಸುಳ್ಳ ಬಾಂಗ್ಲಾದೇಶಿಗಳು ಅಲ್ಲಿನ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ಮಾಡುತ್ತ ಹತ್ಯೆ ಮಾಡುತ್ತಿರುವುದು ಖಂಡನೀಯ. ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸುವುದು, ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚುವುದು, ಲೂಟಿ-ಹತ್ಯಾಕಾಂಡಗಳಂತಹ ಘಟನೆಗಳು ನಡೆಯುತ್ತಿದೆ. ಇವುಗಳನ್ನು ತಡೆಯಲು ಭಾರತ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡಾ. ಪ್ರವೀಣಭಾಯಿ ತೊಗಾಡಿಯಾ ನೇತೃತ್ವದ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗ ದಳ ದೇಶವ್ಯಾಪಿ ಬಾಂಗ್ಲಾದೇಶ ವಿರೋಧಿ ಆಂದೋಲನ ನಡೆಸಲಿದೆ ಎಂದು ಎಚ್ಚರಿಸಿದೆ.
ಹಿಂದೂ ಯುವಕ ದೀಪು ಚಂದ್ರದಾಸ್ ಹತ್ಯೆಗೆ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಮೇಶ ಕುಲಕರ್ಣಿ, ಸುರೇಶ ಸಿ. ಜೈನ್, ಮೋಹನ ಬಿಲಾನಾ, ಮಹೇಶ ಬೊಪಣ್ಣವರ್, ಸಿದ್ದು ಶೆಟ್ಟರ್, ಮಹಾಂತೇಶ ಕುಲಕರ್ಣಿ, ರಾಮ ಭದ್ರನ್, ಅಮಿತ ಕಾಂಬ್ಳೆ, ಶಶಿಕಾಂತ ಬಿಲಾನಾ, ಇತರರು ಇದ್ದರು.