ahind conference ಹುಬ್ಬಳ್ಳಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಹಿಂದುಳಿದ ಹಾಗೂ ಅತೀ ಹಿಂದುಳಿದ ವರ್ಗಗಳ ನಾಯಕರು ಮತ್ತು ನಾಯಕತ್ವ ಉಳಿವಿಗಾಗಿ ಮಠಾಧೀಶರ ಚಿಂತನ-ಮಂಥನ ಸಭೆ ಉದ್ಘಾಟನೆ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ, ಎಂಪಿ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ರಾಜು ಗುರು ಸ್ವಾಮೀಜಿ, ಕೆ. ಮುಖಡಪ್ಪ, ಶಶಿಕುಮಾರ ಮೆಹರವಾಡೆ, ವೆಂಕಟೇಶ ಕಾಟವೆ, ರಾಜು ನಾಯಕವಾಡಿ, ರಮೇಶ ಮಹಾದೇವಪ್ಪನವರ, ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. 
ಧಾರವಾಡ

ahind conference ಆರ್ಥಿಕ ಸಾಮಾಜಿಕ ಹಿಂದುಳಿದವರಿಗೆ ನ್ಯಾಯ ಒದಗಿಸಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಅಭಿಮತ
  • ಹುಬ್ಬಳ್ಳಿಯಲ್ಲಿ ಹಿಂದುಳಿದ ವರ್ಗಗಳ ಮಠಾಧೀಶರ ಚಿಂತನ ಮಂಥನ

ಹುಬ್ಬಳ್ಳಿ: ahind conference ಹಿಂದುಳಿದವರು ಯಾರೆಂಬ ಬಗ್ಗೆ ಗಹನ ಚರ್ಚೆಯಾಗಬೇಕು, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ನ್ಯಾಯ ಒದಗಿಸಬೇಕಾಗಿದೆ. ಹಿಂದುಳಿದವರ ಹೆಸರಿನಲ್ಲಿ ಕೆಲವರು ವೈಯಕ್ತಿಕ ಲಾಭ ಮಾಡಿಕೊಂಡವರಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಅಭಿಪ್ರಾಯಪಟ್ಟರು.

ಇಲ್ಲಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ರಾಷ್ಟ್ರೀಯ ಕೋಲಿ ಬೆಸ್ತ ನಿಶಾದ್​ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಹಿಂದುಳಿದ ಹಾಗೂ ಅತೀ ಹಿಂದುಳಿದ ವರ್ಗಗಳ ನಾಯಕರು ಮತ್ತು ನಾಯಕತ್ವ ಉಳಿವಿಗಾಗಿ ಮಠಾಧೀಶರ ಚಿಂತನ-ಮಂಥನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕರು ಜಾತಿಯ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅವರು ತಮ್ಮ ಸಮಾಜಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸುವಂತಾಗಿದೆ. ಜಾತಿಯ ಅಭಿವೃದ್ಧಿ ಕುರಿತು ಮಾತನಾಡಿ ಅಧಿಕಾರಕ್ಕೆ ಬಂದರೂ ಸಮಾಜಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗಿಲ್ಲ. ಸಾಮಾಜಿಕ ನ್ಯಾಯದ ಕುರಿತು ಗಂಭೀರ ಚರ್ಚೆಯಾಗಬೇಕು ಎಂದರು.
ಹಿಂದುಳಿದ ಹಾಗೂ ಅತೀ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಜಾತಿ ಹಾಗೂ ವ್ಯಕ್ತಿ ಕೇಂದ್ರಿತ ಚರ್ಚೆಗಳನ್ನು ಬದಿಗಿಡಬೇಕು. ಜಾತಿ ಜನಗಣತಿಯ ಉದ್ದೇಶ ಆಯಾ ಜಾತಿಯ ಹಿಂದುಳಿದಿರುವಿಕೆಯನ್ನು ಗುರುತಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದರು.

ಸಂ

ಸಮಾಜದಲ್ಲಿ ಧ್ವನಿ ಇಲ್ಲದವರನ್ನು ಯಾರೂ ಕೇಳುವುದಿಲ್ಲ. ಇವರೆಲ್ಲ ಸಂಘಟಿತ ಹೋರಾಟ ಮಾಡಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ. ಹಿಂದುಳಿದ ವರ್ಗಗಳ ಸಮಾಜಗಳು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಎಷ್ಟೋ ಮಕ್ಕಳು ಓದಲು ಹಾಸ್ಟೇಲ್​ ಸಿಗದೇ ಪರದಾಡುತ್ತಿದ್ದಾರೆ. ಒಂದೂವರೇ ಲಕ್ಷ ಮಕ್ಕಳಿಗೆ ವಸತಿ ನಿಲಯಗಳಿಲ್ಲ ಎಂಬ ಮಾಹಿತಿ ಇದೆ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ಅಗತ್ಯವಾಗಿದೆ. ಸಮುದಾಯಗಳಿಗೆ ನಿಗಮ ಮಂಡಳಿ ರಚಿಸಲಾಗಿದೆ ಆದರೂ ಅಗತ್ಯ ಅನುದಾನ ಸಿಕ್ಕಿಲ್ಲ ಎಂದರು.

ಸಮಾಜಗಳು ಒಗ್ಗೂಡಬೇಕು

ಅಹಿಂದ ನಾಯಕ ಕೆ. ಮುಖಡಪ್ಪ ಮಾತನಾಡಿ, ಸಮಾಜಗಳ ಮಧ್ಯೆ ಪರಸ್ಪರ ಯಾವುದೇ ದೂಷಣೆ ಇರಬಾರದು. ಎಲ್ಲ ಸಮಾಜಗಳು ಒಗ್ಗಟ್ಟಾಗಬೇಕು. ಮಹಾನ್​ ನಾಯಕರನ್ನು ಜಾತಿಗೆ ಸೀಮಿತಗೊಳಿಸದೇ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್​ಎಸ್​ಕೆ ಸಮಾಜದ ಶಶಿಕುಮಾರ ಮೆಹರವಾಡೆ, ಹಿಂದುಳಿದ ವರ್ಗಗಳ ನಾಯಕರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಹಿಂದುಳಿದ ಸಮಾಜಗಳನ್ನು ಒಗ್ಗೂಡಿಸಿ ಸಮಿತಿ ರಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಯುವ ನಾಯಕ ವೆಂಕಟೇಶ ಕಾಟವೆ ಮಾತನಾಡಿ, ಹಿಂದುಳಿದ ವರ್ಗಗಳು ರಾಜಕೀಯವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಚಿಂತನ-ಮಂಥನ ಸಭೆ ಮೂಲಕ ಸಮಾಜಗಳಿಗೆ ಸಂದೇಶ ನೀಡಬೇಕು ಎಂದರು.
ಜಗದ್ಗುರು ಶ್ರೀ ರಾಜು ಗುರು ಸ್ವಾಮೀಜಿ, ರಾಘವೇಂದ್ರ ಗುರೂಜಿ, ಜಗದ್ಗುರು ಭಗೀರಥಾನಂದಪುರಿ ಸ್ವಾಮೀಜಿ, ಗುರುರಾಜೇಂದ್ರ ಸ್ವಾಮೀಜಿ, ರಾಜೇಶ್ವರಾನಂದ ಸ್ವಾಮೀಜಿ, ನಾಗಭೂಷಣ ಸ್ವಾಮೀಜಿ ಹಾಗೂ ಜಯಶ್ರೀ ಮಾತಾ ಸೇರಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ವೀರಣ್ಣ ಹಳೇಗೌಡರ, ದೇವರಾಜ ಕಂಬಳಿ, ಪಾಂಡುರಂಗ ಪಮ್ಮಾರ, ರಾಜು ನಾಯಕವಾಡಿ, ರಮೇಶ ಮಹಾದೇವಪ್ಪನವರ, ಬಾಳು ಮಗಜಿಕೊಂಡಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಅಶೋಕ ಒಡೆಯರ, ಶಂಕರ ಚವ್ಹಾಣ, ಲಕ್ಷ್ಮಣ ಗಂಡಗಾಳೇಕರ್​ ಇತರರು ಪಾಲ್ಗೊಂಡಿದ್ದರು.