ಪ್ರಮುಖ ಮುಖ್ಯಾಂಶಗಳು
ಮಂಜುನಾಥಗದಗಿನ ಹುಬ್ಬಳ್ಳಿ
ಕೃಷಿಯಲ್ಲಿಏನೈತಿ ಬಿಡು ಎಂದು ಉದಾಸೀನ ಮಾಡುಯುವ ರೈತ ಸಮುದಾಯಕ್ಕೆ ಕೃಷಿನಂಬಿದರೆ ಬದುಕು ಬಂಗಾರ ಆಗತೈತಿಎಂದು ಕೃಷಿ ಬಗ್ಗೆ ಉಪನ್ಯಾಸ ನೀಡಿಅವರನ್ನು ಕೃಷಿಯತ್ತ ಸೆಳೆಯುವುದರಜತೆಗೆ ಸಮಗ್ರ ಕೃಷಿ ಮಾಡುತ್ತಸಮೃದ್ಧ ಜೀವನ ಸಾಗಿಸುತ್ತಿದ್ದಾರೆಹುಬ್ಬಳ್ಳಿ ತಾಲೂಕಿನ ಅಡಗಿ ಗ್ರಾಮದರೈತ ಬಸಯ್ಯ ಮಂಟಯ್ಯನವರ.
ಹೌದು,ಬಸಯ್ಯಕಲಿತರು ಎಸ್ಸೆಸ್ಸೆಲ್ಸಿವರೆಗೂಮಾತ್ರ.ಎಷ್ಟಕಲಿತರೂ ಮತ್ತೊಬ್ಬರ ಕೈಯಲ್ಲಿಆಳಾಗಿ ದುಡಿಯಬೇಕು,ಅದೇಕೃಷಿಯಲ್ಲಿ ನಮಗೆ ಬೇಕಾದಂತೆಬೆಳೆದು ಖುಷಿ ಕಾಣಬಹುದು ಎಂಬಸತ್ಯ ಅರಿತು ಹಿರಿಯರಿಂದ ಬಂದಕೃಷಿ ಭೂಮಿಯಲ್ಲೇ ಪ್ರಗತಿಪರಕೃಷಿ ಮಾಡುತ್ತ ಇತರರಿಗೂಮಾದರಿಯಾಗಿದ್ದಾರೆ.
15ಎಕರೆಜಮೀನಿನಲ್ಲಿ ಬಸಯ್ಯ ಸಮಗ್ರ ಕೃಷಿಮಾಡುತ್ತಿದ್ದಾರೆ.ಇದರಲ್ಲಿಸಿರಿಧಾನ್ಯ,ಕಬ್ಬು,ಬಾಳೆ,ಸೀತಾಫಲ,ಪೇರಲ,ಲಿಂಬೆ,ನೆರಳೆ,ಟೆಂಗಿನಗಿಡಗಳನ್ನು ನೆಟ್ಟು ಭರಪೂರ ಆದಾಯಪಡೆಯುತ್ತಿದ್ದಾರೆ.ಇದರೊಟ್ಟಿಗೆಬೀಜೋಪಚಾರವನ್ನೂ ಮಾಡುತ್ತಿದ್ದಾರೆ.
ಮೀನುಕೃಷಿ: 15ಎಕರೆಭೂಮಿಯಲ್ಲಿ ಒಂದು ಎಕರೆಯಲ್ಲಿಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ.ಇದರಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.ಅಷ್ಟೇಅಲ್ಲದೇ ಈ ಹೊಂಡದಲ್ಲೇ ಮೀನುಕೃಷಿಯನ್ನೇ ಮಾಡುತ್ತಿದ್ದಾರೆ.ಸಣ್ಣಮರಿಗಳನ್ನು ತಂದು ಹೊಂಡಕ್ಕೆಬಿಡುತ್ತಾರೆ.ಇವುಗಳಿಗೆಸ್ಥಳೀಯವಾಗಿ ದೊರೆಯುವ ಆಹಾರನೀಡುತ್ತಾರೆ.ಮೀನುಗಳುದೊಡ್ಡು ಆದ ನಂತರ ಮೀನು ಮಾರಾಟಮಾಡುವವರೆ ಬಂದು ತೆಗೆದುಕೊಂಡುಹೋಗುತ್ತಿದ್ದಾರೆ.ಇದುಕೂಡ ಉತ್ತಮ ಆದಾಯ ತಂದು ಕೊಡುತ್ತಿದೆ.ಬೆಳೆಗಳಿಗೆಜೀವಾಮೃತ ಹಾಗೂ ನೈಸಗಿಕ ಗೊಬ್ಬರಹಾಕುತ್ತಿದ್ದಾರೆ.ಕಬ್ಬಿನರವದಿಯನ್ನು ಜಮೀನಿನಲ್ಲೇ ಕೊಳೆಯಿಸಿಗೊಬ್ಬರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.ಇದರಿಂದಭೂಮಿಗೆ ರಂಜಕ,ನೈಟ್ರೋಜನ್ಸಿಗುವುದರಿಂದ ಭೂಮಿ ಫಲವತ್ತವಾಗುತ್ತದೆಎನ್ನುತ್ತಾರೆ ಬಸಯ್ಯ.
ಹೊಸಬೀಜಗಳಿಗೆ ಉತ್ತೇಜನ: ಧಾರವಾಡಕೃಷಿ ವಿವಿ ಹೊಸದಾಗಿ ಸಂಶೋಧನೆಮಾಡಿದ ಬೀಜಗಳನ್ನು ಪ್ರಾಯೋಗಿಕವಾಗಿಬೆಳೆಯಲು ಬಸಯ್ಯ ಅವರಿಗೆ ನೀಡುತ್ತಿದೆ.ತಮ್ಮಹೊಲದಲ್ಲಿ ಅದನ್ನು ಉತ್ತಮವಾಗಿಬೆಳೆದು ನಂತರ ಕೃಷಿ ವಿವಿಗೆನೀಡುತ್ತಿದ್ದಾರೆ.ಅದರಲ್ಲೂಸಿರಿಧಾನ್ಯ ಬೆಳೆಗಳಿಗೆ ಹೆಚ್ಚುಉತ್ತೇಜನ ನೀಡುವ ಮೂಲಕ ದೇಶಿ ಬೀಜಗಳಸಂರಕ್ಷಣೆ ಮಾಡುತ್ತಿದ್ದಾರೆ.ನಾಲ್ವರುಸಮಾನ ಮನಸ್ಕ ರೈತರು ಸೇರಿಕೊಂಡುದೇಸಿ ಬೀಜ ಬೀಜ ಉಳಿಸಿ,ಬೆಳೆಸುವನಿಟ್ಟಿನಲ್ಲಿ ದೇಸಿ ತಳಿ ಬ್ಯಾಂಕ್ಸ್ಥಾಪನೆ ಮಾಡಲು ಮುಂದಾಗಿದ್ದಾರೆ.ಈಬ್ಯಾಂಕ್ ಅಸ್ತಿತ್ವಕ್ಕೆ ಬಂದರೆದೇಸಿ ತಳಿಯ ಬೀಜಗಳು ಎಲ್ಲರಿಗೂದೊರೆತು ಸಿರಿಧಾನ್ಯಗಳ ಕ್ರಾಂತಿಯಾಗಲಿದೆ.
ಮಿಲ್ಲೆಟ್ಮಿಕ್ಸ್: ಸಿರಿಧಾನ್ಯಬಳಸಿ ಇವರೇ ವಿಶೇಷ ಪೌಡರ ತಯಾರುಮಾಡುತ್ತಿದ್ದಾರೆ.ಇದಕ್ಕೆ9ತರಹದಸಿರಿಧಾನ್ಯ ಬಳಕೆ ಮಾಡುತ್ತಿದ್ದಾರೆ.ವಿಶೇಷವಾಗಿಚಿಯಾ ಎಂಬ ವಿಶೇಷ ಧಾನ್ಯಬಳಸುತ್ತಿದ್ದಾರೆ.ಈಧಾನ್ಯ ಅಪರೂಪವಾಗಿದೆ.ಇದೇಕಾರಣಕ್ಕೆ ಏಂಟು ವರ್ಷಗಳಿಂದಒಂದು ಎಕರೆಯಲ್ಲಿ ಈ ಚಿಯಾಬೆಳೆಯುತ್ತಿದ್ದಾರೆ.ಇದನ್ನೆಮಿಲ್ಲೆಟ್ ತಯಾರಿಗೆಗೂ ಬಳಕೆಮಾಡುತ್ತಿದ್ದಾರೆ.ವಾರ್ಷಿಕ15-16ಲಕ್ಷರೂ.ಗಳನ್ನುಕೃಷಿಯಿಂದಲ್ಲೇ ಪಡೆಯುತ್ತಿದ್ದಾರೆ.
ಬಸಯ್ಯಅವರ ಕೃಷಿಪರ ಕಾಳಜಿ,ಸಾಧನೆಗಮನಿಸಿ ರೈತ ರತ್ನ,ಆವಿಷ್ಕಾರರೈತ,ಯುವಶ್ರೇಷ್ಠ ಕೃಷಿ ಸೇರಿ ಮುಂತಾದಪ್ರಶಸ್ತಿಗಳು ಇವರನ್ನು ಅರಿಸಿಬಂದಿವೆ.ಇದಷ್ಟೇಅಲ್ಲದೇ ಹಲವು ಸಂಘ-ಸಂಸ್ಥೆಗಳುಸನ್ಮಾನಿಸಿ ಗೌರವಿಸಿವೆ.
ಕೋಟ್ಕೃಷಿಯಿಂದ ಖುಷಿ ಕಾಣಲು ಸಾಧ್ಯ. ನಾನು ಸಹಿತ ಸಮಗ್ರ ಖುಷಿ ಮಾಡುತ್ತ ನೆಮ್ಮದಿ ಜೀವನ ನಡೆಸುತ್ತಿದ್ದೇನೆ. ಇಷ್ಟೇ ಅಲ್ಲದೇ ಕೃಷಿ ಬಗ್ಗೆ ಉಪನ್ಯಾಸ ನೀಡುತ್ತಿದ್ದೇನೆ.