agri practical ಕೆಇಎ ಪರೀಕ್ಷೆ ಫಲಿತಾಂಶದ ಚಾರ್ಟ್. 
ಧಾರವಾಡ

agri practical ಅಗ್ರಿ ಪ್ರಾಯೋಗಿಕ ಪರೀಕ್ಷೆಯಲ್ಲೂ ಅಕ್ರಮದ ವಾಸನೆ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ನೀಟ್​ನಂತೆ ಮರುಪರೀಕ್ಷೆ ನಡೆಸುವಂತೆ ಆಕಾಂಕ್ಷಿಗಳ ಆಗ್ರಹ
  • ಶೇ. 50 ಕೋಟಾ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆ
ಹುಬ್ಬಳ್ಳಿ: agri practical ಕರ್ನಾಟಕದಲ್ಲಿಯೂ ಕೃಷಿ ವಿಜ್ಞಾನ ಕೋರ್ಸ್​ಗಳಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮವಾಗಿರುವ ಶಂಕೆಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ.
ಕೃಷಿಕರ ಕೋಟಾ ಅಡಿಯಲ್ಲಿ ಕೃಷಿ ವಿಜ್ಞಾನ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ಕೆಸಿಇಟಿ ಕೃಷಿ ಪ್ರಾಯೋಗಿಕ ಪರೀಕ್ಷೆಗಳನ್ನು ಇತ್ತೀಚೆಗೆ ನಡೆಸಲಾಯಿತು. ಇದರ ಫಲಿತಾಂಶದಲ್ಲಿ ಭಾರಿ ಅನ್ಯಾಯವಾಗಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ದೂರಿದ್ದಾರೆ.
ಏನಿದು ಪರೀಕ್ಷೆ?:
ರೈತರು, ಕೃಷಿ ಕಾರ್ಮಿಕರ ಮಕ್ಕಳಿಗೆ ಮೀಸಲಾಗಿರುವ ಶೇ. 50 ಕೋಟಾ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆ ನಡೆಸಲಾಗಿದೆ. ಇದೀಗ ಬಂದಿರುವ ಫಲಿತಾಂಶ ನೋಡಿ ಅಭ್ಯರ್ಥಿಗಳು ಅಚ್ಚರಿ ಹಾಗೂ ಗೊಂದಲಕ್ಕೆ ಈಡಾಗಿದ್ದಾರೆ.

ಪ್ರಶ್ನೆ ಒಂದೇ ಆಗಿರುವುದಿಲ್ಲ

ಎಲ್ಲ ಪರೀಕ್ಷೆ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಒಂದೇ ಆಗಿರುವುದಿಲ್ಲ. ಆಯಾ ಪ್ರದೇಶದಲ್ಲಿ ಕೃಷಿ ಚಟುವಟಿಕೆ, ಬೆಳೆ ಪದ್ಧತಿ, ಪ್ರಾಣಿಗಳು ಮುಂತಾದ ಸಂಗತಿಗಳನ್ನು ಗಮನಿಸಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿರುತ್ತದೆ.
ಪ್ರತಿ ಪ್ರಶ್ನೆಗೆ ನಾಲ್ಕು ಅಂಕದಂತೆ ಒಟ್ಟು 50 ಪ್ರಶ್ನೆಗಳನ್ನು ನೀಡಲಾಗಿತ್ತು. ಎಲ್ಲ ಪ್ರಶ್ನೆಗೆ ಉತ್ತರಿಸಿದರೆ ಅಭ್ಯರ್ಥಿ ಪೂರ್ತಿ 200 ಅಂಕ ಪಡೆಯುತ್ತಾರೆ. ಒಂದು ಪ್ರಶ್ನೆ ತಪ್ಫಾದರೆ ನಾಲ್ಕು ಅಂಕ ಕಡಿತವಾಗುತ್ತದೆ. ಒಂದು ಕೇಂದ್ರದಲ್ಲಿ ಪ್ರಶ್ನೆಗಳು ಸುಲಭ ಇರಬಹುದು, ಇನ್ನೊಂದು ಕಡೆ ಕಠಿಣವಾಗಿರಬಹುದು.
ಆದರೆ, ಪ್ರವೇಶ ಪರೀಕ್ಷೆಯಾಗಿರುವುದರಿಂದ ಕೇವಲ ಹಿರಿಯೂರು ಕೇಂದ್ರದ ವಿದ್ಯಾರ್ಥಿಗಳಿಗೆ ಸಿಂಹ ಪಾಲು ಉಳಿದವರಿಗೆ ಅತ್ಯಂತ ಕಡಿಮೆ ಅವಕಾಶ ಸಿಗಲಿದೆ. ಇದು ಪರೀಕ್ಷೆ ನಡೆಸುವವರು ಮಾಡುತ್ತಿರುವ ಅನ್ಯಾಯ. ರಾಜ್ಯದ ಇತರ ಜಿಲ್ಲೆಗಳ ರೈತರ ಮಕ್ಕಳಿಗೆ ಭಾರಿ ಅನ್ಯಾಯವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕದ 17 ಸೆಂಟರ್​ಗಳಲ್ಲಿ 24354 ಜನ ಪರೀಕ್ಷೆ ಬರೆದಿದ್ದಾರೆ. ಫಲಿತಾಂಶ ಪಟ್ಟಿಯನ್ನು ಪರಿಶೀಲಿಸಿದರೆ ಬೆಂಗಳೂರಲ್ಲಿ 200 ಅಂಕ ಪಡೆದವರು ಕೇವಲ ಒಬ್ಬರು, 196 ಅಂಕದವರು ಕೇವಲ 10 ಜನರು, ಧಾರವಾಡದಲ್ಲಿ 200 ಅಂಕ ಪಡೆದವರು ಕೇವಲ ಇಬ್ಬರು, ವಿಜಯಪುರದಲ್ಲಿ ಒಬ್ಬರೂ ಇಲ್ಲ, ಕಲಬುಗಿರ್ಯಲ್ಲಿ 3 ಜನ ಹೀಗೆ 16 ಕೇಂದ್ರಗಳಲ್ಲಿ 200 ಅಂಕ ಪಡೆದವರು ಬೆರಳೆಣಿಕೆ, ಇನ್ನೂ ಕೆಲವೆಡೆ ಝೀರೋ ಇದ್ದಾರೆ.
ಆದರೆ, ಶಿವಮೊಗ್ಗ ವಿವಿ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕೇಂದ್ರದಲ್ಲಿ 74 ಜನ 200 ಅಂಕ ಪಡೆದವರು ಇದ್ದಾರೆ. ವಿಶೇಷ ಎಂದರೆ ಶಿವಮೊಗ್ಗ ಕೇಂದ್ರದಲ್ಲಿ 200 ಅಂಕ ಪಡೆದವರು ಝೀರೋ ಇದ್ದಾರೆ.