ಸಂಶಿ ಗ್ರಾಮದ ಕೆಎಲ್ಇ ಕಾಲೇಜಿನಲ್ಲಿ ಕೆಎಲ್ಇ ಸಂಸ್ಥೆಯ 110ನೇ ಸಂಸ್ಥಾಪನಾ ದಿನ Saptarishisಆಚರಿಸಲಾಯಿತು. ಶ್ರೀ ಅಭಿನವ ಬಸವಣ್ಣಜ್ಜನವರು, ಎ.ಬಿ. ಉಪ್ಪಿನ, ಬಿ.ಬಿ. ಬೂದಿಹಾಳ, ಬಿ.ಎಂ. ಕಜ್ಜಿ, ಬಿ.ವಿ. ಸೈಬಣ್ಣವರ, ಸಂದೇಶ ಅಚಲಕರ, ಸಿದ್ದು ಧಾರವಾಡಶೆಟ್ಟರ್, ಪ್ರೊ.ರಮೇಶ ಅತ್ತಿಗೇರಿ, ನಿಸರ್ಗ ಕೊರಡೂರ, ಪೂಜಾ ತಂಗಣ್ಣವರ, ಅಭಿಷೇಕ ಬಾಲೆಹೊಸೂರ ಇತರರಿದ್ದರು.
ಕುಂದಗೋಳ: ವಿದ್ಯಾರ್ಥಿಗಳು ಕೆಎಲ್ಇ ಸಂಸ್ಥೆಯನ್ನು ಸ್ಥಾಪಿಸಿದ ಸಪ್ತರ್ಷಿಗಳ (Saptarishis) ಜೀವನ ಚರಿತ್ರೆ ಅಭ್ಯಸಿಸಿ, ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕುಂದಗೋಳ ಕಲ್ಯಾಣಪುರ ಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಹೇಳಿದರು.
ಸಂಶಿ ಗ್ರಾಮದ ಕೆಎಲ್ಇ ಕಾಲೇಜಿನಲ್ಲಿ ಆಯೋಜಿಸಿದ್ದ ಕೆಎಲ್ಇ ಸಂಸ್ಥೆಯ 110ನೇ ಸಂಸ್ಥಾಪನಾ ದಿನಾಚರಣೆ ಮತ್ತು ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಧರ್ಮದರ್ಶಿ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ಕೆಎಲ್ಇ ಸಂಸ್ಥೆಯು ದಾನಿಗಳಿಂದ ಬೆಳೆದು ಇಂದು ಮಹಾನ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದೆ ಎಂದರು.
ಹುಬ್ಬಳ್ಳಿಯ ಸಮೃಕ್ಷಾ ಸಂಸ್ಥೆಯ ಸಂಸ್ಥಾಪಕ ಸುಚೀತ ಅಂಗಡಿ ಮಾತನಾಡಿ, ರಕ್ತದಾನವು ಜೀವ ರಕ್ಷಿಸುವ ಪುಣ್ಯದ ಪವಿತ್ರ ಕಾರ್ಯವಾಗಿದೆ. ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ರೋಗಿಗಳ ಬಾಳಿಗೆ ಆಶಾಕಿರಣವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎ.ಬಿ. ಉಪ್ಪಿನ ಮಾತನಾಡಿ, ವಿದ್ಯಾರ್ಥಿಗಳು ಕೆಎಲ್ಇ ಸಂಸ್ಥೆಯ ಇತಿಹಾಸ ಅರಿತು ಸಂಸ್ಥೆಯ ಕೀರ್ತಿ ಹೆಚ್ಚಿಸಬೇಕು ಎಂದರು.
ಅನೇಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ರಕ್ತದಾನ ಮಾಡಿದರು. ಬಿ.ಬಿ. ಬೂದಿಹಾಳ, ಬಿ.ಎಂ. ಕಜ್ಜಿ, ಬಿ.ವಿ. ಸೈಬಣ್ಣವರ, ಸಂದೇಶ ಅಚಲಕರ, ಸಿದ್ದು ಧಾರವಾಡಶೆಟ್ಟರ್ ಉಪಸ್ಥಿತರಿದ್ದರು. ಪ್ರಾಚಾರ್ಯ ಪ್ರೊ.ರಮೇಶ ಅತ್ತಿಗೇರಿ ಸ್ವಾಗತಿಸಿದರು. ನಿಸರ್ಗ ಕೊರಡೂರ, ಪೂಜಾ ತಂಗಣ್ಣವರ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ ಬಾಲೇಹೊಸೂರ ವಂದಿಸಿದರು.