ನವಲಗುಂದ ಪಟ್ಟಣದ ಪಂಚಗೃಹ ಹಿರೇಮಠ ಗುರು ಪಟ್ಟಾಧೀಕರ ನಿಮಿತ್ತ ಜಗದ್ಗುರು ಪಂಚ ಪೀಠಾದೀಶರ ಅಡಪಲ್ಲಕ್ಕಿ ಉತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು. 
ಧಾರವಾಡ

pallakki: ಪಂಚ ಪೀಠಾಧೀಶರ ಅಡ್ಡ ಪಲ್ಲಕ್ಕಿ ಮಹೋತ್ಸವ

ನವಲಗುಂದ: ಪಟ್ಟಣದ ಪಂಚಗೃಹ ಹಿರೇಮಠದಲ್ಲಿ ಶ್ರೀ ವೀರಬಸವ ದೇವರ ಗುರು ಪಟ್ಟಾಧಿಕಾರದ ನಿಮಿತ್ತ ಪಂಚ ಪೀಠದ ಶ್ರೀಗಳ ಅಡ್ಡ ಪಲ್ಲಕ್ಕಿ (pallakki) ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಂಡೆ ವಾದ್ಯ, ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಹಿರೇಮಠದಿಂದ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರು, ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು, ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಡಾ. ಚಂದ್ರಶೇಖರ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ಪಟ್ಟಣದ ರಾಮಲಿಂಗ ಓಣಿ, ಗುಡ್ಡದ ಕೇರಿ, ಅಜಾತ ನಾಗಲಿಂಗಜ್ಜನ ಮಠ, ಗಣಪತಿ ಗುಡಿ ಕ್ರಾಸ್, ಗಾಂಧಿ ಮಾರ್ಕೆಟ್, ಲಿಂಗರಾಜ್ ಸರ್ಕಲ್, ತೆಗ್ಗಿನಕೇರಿ ಓಣಿ, ಕಳ್ಳಿಮಠ ಓಣಿ, ಗ್ರಾಮ ಚಾವಡಿ, ದ್ಯಾಮವ್ವನಗುಡಿ ಕೂಟ ಮುಂದೆ ಸಾಗಿ ಹಿರೇಮಠಕ್ಕೆ ತಲುಪಿತು. ಮಹಿಳೆಯರು ಪೂರ್ಣಕುಂಭ ಸಾಗಿದರು. ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೋಪ್ಪ, ಕೆ.ಎನ್. ಗಡ್ಡಿ, ದೇವರಾಜ ದಾಡಿಭಾವಿ, ವೀನೊಧ ಅಸೂಟಿ, ಲಿಂಗರಾಜ ಸರದೇಸಾಯಿ, ಎ.ಬಿ. ಹೀರೆಮಠ, ಅಣ್ಣಪ್ಪ ಬಾಗಿ, ಪಾಂಡಪ್ಪ ಕೋನರಡ್ಡಿ, ಶಿವಾಜಿ ಕಲಾಲ, ಅಪ್ಪಣ್ಣ ಹಳ್ಳದ, ಪ್ರಕಾಶ ಶಿಗ್ಲಿ, ಈರಣ್ಣ ಚವಡಿ, ಮಾಂತೇಶ ಕಲಾಲ, ಯಲ್ಲಪ್ಪ ಭೋವಿ ಇತರರಿದ್ದರು.