(acid case) ಗಂಡ-ಹೆಂಡತಿ ಜಗಳದಲ್ಲಿ ಆ್ಯಸಿಡ್ ಎರಚಾಟ
- ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು
- ಗಂಡ-ಹೆಂಡತಿ ಜಗಳದಲ್ಲಿ ಆ್ಯಸಿಡ್ ಎರಚಾಟ
ಹುಬ್ಬಳ್ಳಿ: ಗಂಡ-ಹೆಂಡತಿ ಜಗಳದಲ್ಲಿ ಆ್ಯಸಿಡ್ ಎರಚಾಡಿಕೊಂಡ (acid case) ಪರಿಣಾಮ ನಾಲ್ಕು ತಿಂಗಳು ಮಗು ಸಮೇತ ಐವರು ಗಾಯಗೊಂಡ ಘಟನೆ ಇಲ್ಲಿಯ ತಾರಿಹಾಳದ ವಾಜಪೇಯಿ ನಗರದಲ್ಲಿ ಶನಿವಾರ ಸಂಭವಿಸಿದೆ.
ಸುರೇಶ (37), ರಾಜೇಶ್ವರಿ (24), ನಾಲ್ಕು ತಿಂಗಳು ಮಗು, ರಾಜೇಶ್ವರಿ ಸಹೋದರಿಯರಾದ ಶ್ರುತಿ (21), ರೇಷ್ಮಾ (19) ಗಾಯಗೊಂಡಿದ್ದಾರೆ. ಆದರೆ, ಯಾವ ಕಾರಣಕ್ಕೆ ಜಗಳವಾಗಿದೆ ಎಂಬುದರ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಸುರೇಶಗೆ ಶೇ. 35ಕ್ಕೂ ಹೆಚ್ಚು, ರಾಜೇಶ್ವರಿ ಅವರಿಗೆ ಶೇ. 55ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ. ನಾಲ್ಕು ತಿಂಗಳು ಮಗುವಿಗೆ ಶೇ. 15ರಷ್ಟು, ಶ್ರುತಿ ಮತ್ತು ರೇಷ್ಮಾ ಅವರಿಗೂ ಶೇ. 5ರಿಂದ 10ರಷ್ಟು ಸುಟ್ಟ ಗಾಯಳಗಾಗಿವೆ. ಇವರೆಲ್ಲರಿಗೂ ಕೆಎಂಸಿಆರ್‌ಐನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿನ್ನ ಶುದ್ಧಗೊಳಿಸುವ ನೈಟ್ರಿಕ್ ಆ್ಯಸಿಡ್ ಬಳಕೆಯಾಗಿರುವ ಸಾಧ್ಯತೆ ಇದೆ ಪೊಲೀಸರು ಶಂಕಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.