ಸಂಜನಾ ಶಿರೂರ ಮತ್ತು ಸ್ಫೂರ್ತಿ ಹಿರೇಮಠ
ಧಾರವಾಡ: ಪತ್ರಿಕಾ ವಿತರಕರ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ಪತ್ರಿಕಾ ವಿತರಕ ಮಹಾಂತೇಶ ಶಿರೂರ ಅವರ ಪುತ್ರಿ ಸಂಜನಾ ಶಿರೂರ ಶೇ. 93 ಅಂಕ ಗಳಿಸಿದ್ದಾಳೆ. ಈಕೆ ಪ್ರಜೆಂಟೇಷನ್ ಶಾಲೆಯ ವಿದ್ಯಾರ್ಥಿನಿ. ಮತ್ತೋರ್ವ ಪತ್ರಿಕಾ ವಿತರಕ ಗುರುಸ್ವಾಮಿ ಹಿರೇಮಠ ಅವರ ಮಗಳು ಸ್ಫೂರ್ತಿ ಹಿರೇಮಠ ಶೇ. 91.2 ಅಂಕ ಗಳಿಸಿದ್ದಾಳೆ. ಈಕೆ ಕೆಪಿಇಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ವಿದ್ಯಾರ್ಥಿಗಳ ಸಾಧನೆಯನ್ನು ಪತ್ರಿಕಾ ವಿತರಕರ ಜಿಲ್ಲಾ ಸಂಘ ಅಭಿನಂದಿಸಿದೆ.