ಹುಬ್ಬಳ್ಳಿಯ ಚೇತನ ಪಬ್ಲಿಕ್ ಸ್ಕೂಲ್ ಮಕ್ಕಳು ಎನ್‌ಸಿಸಿ ಶಿಬಿರದಲ್ಲಿ ಭಾಗವಹಿಸಿ ವಿವಿಧ ವಿಭಾಗದಲ್ಲಿ achievement ಗೆದ್ದು ಬೀಗಿದರು. 
ಧಾರವಾಡ

achievement ಚೇತನ ಪಬ್ಲಿಕ್ ಸ್ಕೂಲ್ ಮಕ್ಕಳ ಸಾಧನೆ

ಹುಬ್ಬಳ್ಳಿ: ಇಲ್ಲಿಯ ಅಕ್ಷಯ ನಗರದ ಚೇತನ ಪಬ್ಲಿಕ್ ಸ್ಕೂಲ್ ಮಕ್ಕಳು ಹೊಸ ಸಾಧನೆ achievement ಮೆರೆದಿದ್ದಾರೆ.
ಧಾರವಾಡದಲ್ಲಿ ಇತ್ತೀಚೆಗೆ ಜರುಗಿದ 27 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಶಿಬಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ರಂಗೋಲಿ ಸ್ಪರ್ಧೆಯಲ್ಲಿ ಭುವಿ ಸುಕಾಲೆ ಪ್ರಥಮ, ವಾಲಿಬಾಲ್ ಸ್ಪರ್ಧೆಯಲ್ಲಿ ಬಾಲಕರು ಪ್ರಥಮ, ಥ್ರೋಬಾಲ್ ಸ್ಪರ್ಧೆಯಲ್ಲಿ ಬಾಲಕಿಯರು ಪ್ರಥಮ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಪ್ರತೀಕ ದುಂದುರ, ವೀರ ಕಲ್ಪನೆ, ಓಜಲ್ ರಾಯ್ಕರ್ ಬೆಸ್ಟ್ ಕೆಡೆಟ್ಸ್ ಆಗಿ ಆಯ್ಕೆಯಾಗಿದ್ದಾರೆ.
ತಬಲಾ ವಾದ್ಯದಲ್ಲಿ ಕುಶಾಲ್ ಕುಲಕರ್ಣಿ, ಗಿಟಾರ್ ವಾದ್ಯದಲ್ಲಿ ವಿಜಿತ್ ಹುಗ್ಗಿ, ಯೋಗದಲ್ಲಿ ಪ್ರತೀಕ್ ದುಂದುರ್ ಗೆದ್ದು ಜು. 3ರಂದು ಮೈಸೂರಿನಲ್ಲಿ ನಡೆಯಲಿರುವ ಇಬಿಎಸ್‌ಬಿ (ಏಕ್ ಭಾರತ ಶ್ರೇಷ್ಠ ಭಾರತ) ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ.