ಕೆಸಿಡಿ 
ಧಾರವಾಡ

ಶಿಸ್ತು, ಬದ್ಧತೆ, ಸಮರ್ಪಣೆಯಿಂದ ಸಾಧಿಸಿ

ಜಗದೀಶ ಹೊಂಬಳಿ
ಧಾರವಾಡ: ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರಸ್ತುತ ಆರ್ಥಿಕ ವಿದ್ಯಮಾನಗಳನ್ನು ಅರಿಯುವುದು ಹೆಚ್ಚು ಅವಶ್ಯಕತೆ ಇದೆ ಎಂದು ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎಚ್. ನಾಗೂರ ಹೇಳಿದರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ಅರ್ಥಶಾಸ್ತç ವಿಭಾಗದಿಂದ ಕಾಲೇಜಿನ ಫ್ಯಾರನ್ ಸಭಾಂಗಣದಲ್ಲಿ ಆಯೋಜಿಸಿದ್ದ `ಅರ್ಥ ಸಂಚಯ-2026' ಕಾರ್ಯಕ್ರಮ ಉದ್ಘಾಟಿಸಿ, ಬಿ.ಎ. ಅಂತಿಮ ವರ್ಷದ ಬೀಳ್ಕೊಡುಗೆ, ವಿಭಾಗದ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಯಶಸ್ಸಿಗಾಗಿ ಶಿಸ್ತು, ಬದ್ಧತೆ, ಸಮರ್ಪಣೆ ಹಾಗೂ ನಿರಂತರ ಪರಿಶ್ರಮದಿಂದ ಸಾಧನೆ ಮಾಡಲು ಪ್ರಯತ್ನಿಸಬೇಕು. ಇಂದಿನ ಜಾಗತಿಕ ಸಂದರ್ಭದಲ್ಲಿ ಅರ್ಥಶಾಸ್ತ್ರದಲ್ಲಿ ವಿಸ್ತೃತ ಅವಕಾಶಗಳಿವೆ. ಬಿ.ಎ. ಅರ್ಥಶಾಸ್ತ್ರ ಓದಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರತ್ಯೇಕ ಅಧ್ಯಯನ ಸಂಸ್ಥೆಗಳಿವೆ. ದೈನಂದಿನ ಜೀವನದಲ್ಲಿ ಅರ್ಥಶಾಸ್ತçವು ಹಾಸು ಹೊಕ್ಕಾಗಿದೆ. ವಿದ್ಯಾರ್ಥಿಗಳು ಉತ್ಸಾಹ, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಐ.ಸಿ. ಮುಳಗುಂದ ಮಾತನಾಡಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಅರ್ಥಶಾಸ್ತ್ರ ಮುಖ್ಯಸ್ಥೆ ಡಾ. ಎಸ್. ಅನ್ನಪೂರ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಅರ್ಥಶಾಸ್ತç ವಿಭಾಗದ ವಿಷಯ ಸಂಯೋಜಕ ಡಾ. ಶಿಲ್ಪಾ ಧಾರವಾಡ, ಡಾ. ಸ್ಟೆಲ್ಲಾ ಸ್ಟೀವನ್, ಡಾ. ದಳಪತಿ, ಡಾ. ಓದು ಗೌಡರ, ಶಾಲಿನಿ, ಸಿದ್ದಪ್ಪ ಇತರರಿದ್ದರು.