ಉಪ್ಪಿನಬೆಟಗೇರಿ ಸ.ಮಾ.ಕ. ಶಾಲೆಯಲ್ಲಿ (School) ಮಂಗಳವಾರ ಏರ್ಪಡಿಸಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ನಿಜಗುಣಿ ಹೂಲಿ ಉದ್ಘಾಟಿಸಿದರು.
ಉಪ್ಪಿನಬೆಟಗೇರಿ: ವಿದ್ಯಾರ್ಥಿಗಳು ಶಿಕ್ಷಣವಂತರಾಗಿ, ಅಧ್ಯಯನ ಮಾಡಿದ ಶಾಲೆಗೆ ಕೀರ್ತಿ ತರಬೇಕು ಎಂದು ಉಪ್ಪಿನಬೆಟಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಎನ್. ಜಿ. ಗುರುಪುತ್ರನವರ ಹೇಳಿದರು.
ಅವರು, ಸ್ಥಳೀಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ದತ್ತಿದಾನ, 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯ ಜತೆಗೆ ಮೌಲ್ಯಯುತವಾಗಿದ್ದು, ಗಮನವಿಟ್ಟು ಅಭ್ಯಾಸ ಮಾಡಿದರೆ, ವಾರ್ಷಿಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ ಒಳ್ಳೆಯ ಅಂಕ ಪಡೆಯಬಹುದು ಎಂದರು.
ಪದೋನ್ನತಿ ಹೊಂದಿದ ಮುಖ್ಯ ಶಿಕ್ಷಕ ಎಸ್.ಡಿ. ಛಬ್ಬಿ, ಸಹ ಶಿಕ್ಷಕಿ ಆರ್.ಡಿ. ಭಜಂತ್ರಿ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
1ರಿಂದ 7ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ದತ್ತಿದಾನದ ಬಡ್ಡಿ ಹಣವನ್ನು ಹಾಗೂ ವಿವಿಧ ಆಟೋಟಗಳ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ನಿಜಗುಣಿ ಹೂಲಿ, ಸದಸ್ಯರಾದ ರಮೇಶ ಹಳಮನಿ, ಗಂಗಪ್ಪ ತಳವಾರ, ಮಂಜುಳಾ ತಿಗಡಿಮಠ, ಮಕ್ತುಮ್ ಹುಸೇನ್ ನದಾಫ್, ಮಂಜುನಾಥ ಅಷ್ಟಗಿ, ತವಸುಮ್ ಕುಡಚಿ, ಶಂಕರ ಬೆಳವಡಿ, ನಾಗಪ್ಪ ದಿವಟಗಿ, ಶಿಕ್ಷಕರಾದ ಸಂತೋಷ ನಾಯ್ಕರ, ಜಿ.ಎಸ್.ಬಡಸದ, ಜಿ.ಎಸ್,ಚವಾಣ, ಎ.ಎಂ.ಮೆಣಸಗಿ, ನೀಲಮ್ಮ ಬಂಗಡಿ, ದ್ರಾಕ್ಷಾಯಣಿ ಹಡಪದ, ಸಂಜಯ ಕೊಡಿ, ಲಕ್ಮಿ ತಳವಾರ, ಮಲ್ಲಿಕಾರ್ಜುನ ವಿಜಾಪೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.