ವಿವಿಧ ಶುಲ್ಕಗಳ ಹೆಚ್ಚಳವನ್ನು (ABVP protest) ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎದುರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಕುಲಪತಿಗೆ ಮನವಿ ಸಲ್ಲಿಸಿದರು. ವೆಂಕಟೇಶ ಡಾಂಗೆ, ಸಚಿನ ಕುಳಗೇರಿ, ಅಭಿಷೇಕ ದೊಡ್ಡಮನಿ, ಇತರರು ಇದ್ದರು. 
ಧಾರವಾಡ

ಶುಲ್ಕ ಹೆಚ್ಚಳ ವಿರೋಧಿಸಿ(ABVP protest) ಪ್ರತಿಭಟನೆ

ಸಂತೋಷ ವೈದ್ಯ
ಹುಬ್ಬಳ್ಳಿ: ಬೋಧನಾ, ಮರು ಪರೀಕ್ಷೆ, (ABVP protest) ಘಟಿಕೋತ್ಸವ ಹಾಗೂ ವಿವಿಧ ಶುಲ್ಕಗಳ ಹೆಚ್ಚಳವನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎದುರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
3700 ರೂ. ಇದ್ದ ಬೋಧನಾ ಶುಲ್ಕವನ್ನು 8580 ರೂ. ಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳವನ್ನು ಕರ್ನಾಟಕ ಹೈಕೋರ್ಟ್ ಅವೈಜ್ಞಾನಿಕ ಹಾಗೂ ಕಾನೂನು ಬಾಹಿರ ಎಂದು ಪರಿಗಣಿಸಿದೆ. ವ್ಯತ್ಯಾಸದ ಹಣವನ್ನು ಎರಡು ತಿಂಗಳೊಳಗೆ ವಿದ್ಯಾರ್ಥಿಗಳಿಗೆ ಪಾವತಿಸಲು ನಿರ್ದೇಶಿಸಿತ್ತು. ಆದರೆ, ವಿಶ್ವವಿದ್ಯಾಲಯ ಪಾವತಿಸಿಲ್ಲ. ವಿವಿ ವಿದ್ಯೆ ನೀಡುವ ಬದಲು ವ್ಯವಹಾರ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
2023ರಲ್ಲಿ ಇದ್ದ ಮರು ಪರೀಕ್ಷೆ ಶುಲ್ಕ 260ರಿಂದ 368 ರೂ. ಗೆ ಹೆಚ್ಚಿಸಲಾಗಿದೆ. ಯುಜಿಸಿ ನಿಯಮಾವಳಿ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಶೇ. 15ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶವಿದ್ದರೂ ಶೇ. 31ರಷ್ಟು ಏರಿಕೆ ಮಾಡಲಾಗಿದೆ. ಇದನ್ನು ಕಡಿಮೆ ಮಾಡಬೇಕು. ಘಟಿಕೋತ್ಸವ ಶುಲ್ಕವನ್ನು ಸಮಾನವಾಗಿ ಪರಿಗಣಿಸಿ 2479 ರೂ. ಗೆ ಇಳಿಸಬೇಕು. ಅಂಚೆ ಪದವಿ ಪಡೆಯುವವರಿಗೆ ಅಂಚೆ ಖರ್ಚು ಹಣವನ್ನು ಮಾತ್ರ ಪಡೆಯಬೇಕೆಂದು ಆಗ್ರಹಿಸಿದೆ.
ಮನವಿ ಸ್ವೀಕರಿಸಿದ ವಿವಿ ಕುಲಪತಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ವಿದ್ಯಾರ್ಥಿ ನಾಯಕರೊಂದಿಗೆ ಸಭೆ ನಡೆಸಿ ಬೇಡಿಕೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಎಬಿವಿಪಿ ತಿಳಿಸಿದೆ.
ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಡಾಂಗೆ, ಸಚಿನ ಕುಳಗೇರಿ, ಅಭಿಷೇಕ ದೊಡ್ಡಮನಿ, ಸನತ್ ತೋಟಿಗೇರ, ಮಣಿಕಂಠ ದೇಸಾಯಿ, ಲೋಕೇಶ, ಫಣಿ ರಾಘವೇಂದ್ರ, ಅಮರ, ದರ್ಶನ, ಇಶಿಕಾ, ಸಂಜನಾ, ಮನೋಜ್ ಇತರರು ಇದ್ದರು.