ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್‌ನಲ್ಲಿ ಅಂಪೈರ್ ಅಭಿಜಿತ್ ಬೆಂಗೇರಿ (abhijit bengeri) ಹಾಗೂ ವಿಮರ್ಷಾ ಹೋತಪೇಟ ಅವರು ಅಂಗವಿಕಲರಿಗೆ ಗುರುವಾರ ಕೃತಕ ಕಾಲು ಜೋಡಿಸಿದರು.
ಹುಬ್ಬಳ್ಳಿ: ಅಭಿಜಿತ್ ಬೆಂಗೇರಿ (abhijit bengeri) ಪೌಂಢೇಷನ್ ಮತ್ತು ಆಲ್ ಇಂಡಿಯಾ ಜೈನ್ ಯೂಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ಆಶ್ರಯದಲ್ಲಿ ಇಲ್ಲಿಯ ಕೆಎಂಸಿಆರ್‌ಐ ಪ್ರಾಂಗಣದಲ್ಲಿರುವ ಮಹಾವೀರ ಲಿಂಬ್ ಸೆಂಟರ್‌ನಲ್ಲಿ ಗುರುವಾರ ಉಚಿತ ಕೃತಕ ಕಾಲು ಜೋಡಣಾ ಶಿಬಿರ ಏರ್ಪಡಿಸಲಾಗಿತ್ತು.
ಫೌಂಡೇಷನ್ ಅಧ್ಯಕ್ಷ ಹಾಗೂ ಕ್ರಿಕೆಟ್ ಅಂಪೈರ್ ಅಭಿಜಿತ್ ಬೆಂಗೇರಿ ಮಾತನಾಡಿ, ಅಂಗವಿಕಲರಿಗೆ ವಿವಿಧ ರೀತಿಯ ಕ್ರೀಡಾಕೂಟಗಳನ್ನು ಆಯೋಜಿಸಿ ಅವರಲ್ಲಿ ಒಡಮೂಡುವ ಸಂತೋಷ ಕಣ್ತುಂಬಿಕೊಳ್ಳುವ ಆಸೆ ಬಂದಿದೆ. ಹಾಗಾಗಿಯೇ ಅವರಿಗಾಗಿ ಕ್ರೀಡಾಕೂಟಗಳನ್ನು ಆಯೋಜಿಸಲು ಶ್ರಮಿಸುವುದಾಗಿ ತಿಳಿಸಿದರು.
ಲಿಂಬರ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ಬೆಂಗೇರಿ ಅವರು ಅಂಗವಿಕಲರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದಾರೆ ಎಂದರು.
ಬೆಳಗಾವಿ, ರಾಯಚೂರ, ಬೆಳ್ಳಾರಿ, ಹಾವೇರಿ, ಗದಗ ಸುತ್ತಮುತಲಿನ ಜಿಲ್ಲೆಗಳಿಂದ ಆಗಮಿಸಿದ್ದ 30 ಅಂಗವಿಕಲರಿಗೆ ಕೃತಕ ಕಾಲು ಜೋಡಿಸಲಾಯಿತು.
ಕಾರ್ಯದರ್ಶಿ ವಿಮರ್ಷಾ ಹೋತಪೇಟ (ಬೆಂಗೇರಿ), ಖಜಾಂಚಿ ವಿಕ್ರಮ ಭಾಂಡಗೆ, ಗೌತಮ ಗುಲೇಚಾ, ಅಶೋಕ ಕೊಠಾರಿ, ಪ್ರಕಾಶ ಕಠಾರಿಯಾ, ಮಹಾವೀರ ಕುಂದೂರ, ಸುಭಾಷ ಢಂಕ ಇತರರು ಇದ್ದರು.