ಹುಬ್ಬಳ್ಳಿ: ಸೌದಿ ಅರೇಬಿಯಾದ ಮದೀನಾ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ (road accident) ಮೃತಪಟ್ಟವರಲ್ಲಿ ಹುಬ್ಬಳ್ಳಿ ಗಣೇಶಪೇಟ ನಿವಾಸಿ ಒಬ್ಬರು ಸೇರಿದ್ದಾರೆ.
ಅಬ್ದುಲ್ ಗನಿ ಶಿರಹಟ್ಟಿ (52) ಮೃತಪಟ್ಟವರು. ಇವರು ದುಬೈನಲ್ಲಿ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದೆ ಹೈದರಾಬಾದ್‌ಗೆ ಬಂದಿದ್ದು, ಸ್ನೇಹಿತರೊಂದಿಗೆ ಸೇರಿ ಮೆಕ್ಕಾ ಯಾತ್ರೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಇವರು ಸೇರಿದಂತೆ 42 ಜನರಿದ್ದ ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಬಸ್, ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿತ್ತು. ಈ ದಾರುಣ ಘಟನೆಯಲ್ಲಿ ಅಬ್ದುಲ್ ಗನಿ ಸೇರಿ ಸಜೀವವಾಗಿ ದಹನವಾಗಿದ್ದಾರೆ.
ಅಬ್ದುಲ್ ಗನಿಗೆ ತಾಯಿ, ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.
ಸಚಿವ ಜಮೀರ್ ಅಹ್ಮದ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರ ಪ್ರಯತ್ನದಿಂದ ಗನಿ ಅವರ ಕುಟುಂಬದವರನ್ನು ಸೌದಿ ಅರೇಬಿಯಾಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ತಿಳಿಸಿದ್ದಾರೆ.