abbayya ಶಾಸಕ ಪ್ರಸಾದ ಅಬ್ಬಯ್ಯ. 
ಧಾರವಾಡ

abbayya ಮಹಾತ್ಮ ಗಾಂಧಿ ಹೆಸರಿಗೆ ಅಪಮಾನ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದ ವಿರುದ್ಧ ಅಬ್ಬಯ್ಯ ಆಕ್ರೋಶ
  • ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ
  • ಬಡ ಜನರ ಆದಾಯಕ್ಕೂ ಕತ್ತರಿ
ಹುಬ್ಬಳ್ಳಿ: abbayya ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಮನರೇಗಾ (ಎಂಎನ್​ಆರ್​ಇಜಿ) ಯೋಜನೆ ಹೆಸರನ್ನು ಮರುನಾಮಕರಣ ಮಾಡುವ ಮೂಲಕ ಬಿಜೆಪಿಯು ಮಹಾತ್ಮ ಗಾಂಧಿ ಅವರಿಗೆ ಅಪಮಾನ ಮಾಡಿದೆ ಎಂದು ಸ್ಲಂ ಬೋರ್ಡ್​ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 20 ವರ್ಷದಿಂದ ಮನರೇಗಾ ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಸಿದೆ. ಬಡವರಿಗೆ ವರ್ಷದಲ್ಲಿ 100 ದಿನ ಕೆಲಸದ ಗ್ಯಾರಂಟಿ ನೀಡುವ ಯೋಜನೆ ಇದಾಗಿದೆ. ಕರೊನಾ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರ ಉಸಿರಾಗಿ ಕೆಲಸ ಮಾಡಿದೆ. ಈಗ ಬಿಜೆಪಿ ಮೊದಲಿದ್ದ ನಿಯಮಗಳನ್ನು ತೆಗೆದುಹಾಕಿ ಯೋಜನೆಯ ಆತ್ಮಕ್ಕೆ ಕೊಡಲಿ ಪೆಟ್ಟು ನೀಡಿದೆ.
ಬಿಜೆಪಿ ಸರ್ಕಾರ ಮರುನಾಮಕರಣದೊಂದಿಗೆ ಮಸೂದೆ ಮಂಡಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆದಿದ್ದು ಮಾತ್ರವಲ್ಲ, ಮಹಾತ್ಮ ಗಾಂಧಿಗೆ ಅವಮಾನ ಮಾಡಿದೆ.
ಕೇಂದ್ರ ಸರ್ಕಾರ ಈ ಯೋಜನೆಯಡಿ ನೀಡುವ ಅನುದಾನವನ್ನು ಶೇ. 60ರಷ್ಟು ಕಡಿತ ಮಾಡಿದೆ. ಈಗಾಗಲೇ ರಾಜ್ಯಗಳು ಜಿಎಸ್​ಟಿ ಹಂಚಿಕೆ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದೆ. ಇದರ ಮೇಲೆ ಕೇಂದ್ರ ಸರ್ಕಾರ ಮನರೇಗಾ ಯೋಜನೆಗೆ ತಿದ್ದುಪಡಿ ತಂದು ಕೆಲಸ, ಬಡ ಜನರ ಆದಾಯಕ್ಕೂ ಕತ್ತರಿ ಹಾಕುತ್ತಿದೆ ಎಂದು ಅಬ್ಬಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.