ಧಾರವಾಡ ತಾಲೂಕಿನ ಪುಡಕಲಕಟ್ಟಿ aatma projectಗ್ರಾಮದ ಶ್ರೀ ಆತ್ಮಾನಂದ ಆಶ್ರಮದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಕಿಸಾನ್‌ಗೋಷ್ಠಿ ಕಾರ್ಯಕ್ರಮ ಬುಧವಾರ ಜರುಗಿತು.
ಹುಬ್ಬಳ್ಳಿ: ಧಾರವಾಡ ತಾಲೂಕಿನ ಪುಡಕಲಕಟ್ಟಿ ಗ್ರಾಮದ ಶ್ರೀ ಆತ್ಮಾನಂದ ಆಶ್ರಮದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿaatma project ಕಿಸಾನ್‌ಗೋಷ್ಠಿ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.
ಕೃಷಿ ಇಲಾಖೆ ಉಪನಿರ್ದೇಶಕ ಡಾ.ಟಿ.ಎಚ್. ನಟರಾಜ ಮಾತನಾಡಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ರೈತರು ಹೆಚ್ಚು ಗಮನ ಹರಿಸಬೇಕು. ಇದರಿಂದ ಉತ್ತಮ ಬೆಳೆ ಪಡೆಯಬಹುದು ಎಂದು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ತಜ್ಞೆ ಡಾ. ಪಲ್ಲವಿ ಮಾತನಾಡಿ, ಸಮತೋಲನ ಗೊಬ್ಬರ ಹೇಗೆ ಬಳಕೆ ಮಾಡಬೇಕು ಮತ್ತು ಸಮಗ್ರ ಪೋಷಕಾಂಶಗಳಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರು ಎಲೆಗಳ ಗೊಬ್ಬರ ಬಳಕೆ ಹೇಗೆ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ರೈತರಿಗೆ ವಿವರಿಸಿದರು.
ಕೃಷಿ ಮಂತ್ರಾಲಯದ ವಿಸ್ತಾರಣಾಧಿಕಾರಿ ರುದ್ರಪ್ಪ ಯಳಲಿ ಮಾತನಾಡಿದರು.
ಪ್ರಗತಿ ಪರ ರೈತ ಈರಣ್ಣ ಸತ್ಯಣ್ಣನವರ, ಅಮ್ಮಿನಭಾವಿ ಕೃಷಿ ಅಧಿಕಾರಿ ರೇಖಾ ಬೆಳ್ಳಟ್ಟಿ, ಪುಡಕಲಕಟ್ಟಿ ಪಿಡಿಒ ಎ.ಎಂ. ಬಾವಾಖಾನವರ, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ, ತಾಲೂಕು ಕೃಷಿಕ ಸಮಾಜದ ಸದಸ್ಯ ಭೀಮ್ಮಪ್ಪ ಕಸಾಯಿ, ತಾಲೂಕು ಉಪಾಧ್ಯಕ್ಷ ಕಲ್ಲಪ್ಪ ಹಟ್ಟಿ, ಆತ್ಮ ಯೋಜನಾಧಿಕಾರಿ ಸಂಗಮೇಶ ಮಂಗೋಜಿ, ಶಿವಕುಮಾರ, ಸವಿತಾ ತಡಕೋಡ, ಸಂತೋಷ ಮಾಳಿ ಇತರರಿದ್ದರು.