aakash neet ಹುಬ್ಬಳ್ಳಿಯ ಆಕಾಶ್ ಸಂಸ್ಥೆಯಲ್ಲಿ ನೀಟ್ ಸಾಧಕರನ್ನು ಸನ್ಮಾನಿಸಲಾಯಿತು. ಸಹಾಯಕ ನಿರ್ದೇಶಕ ವಿಜಯಕುಮಾರ, ವಿಜಯಮಹಾಂತೇಶ ಮಠ, ಸಾಗರ ಪಾಟೀಲ, ಜೋಹಾ ಸಮ್ರೀನ್, ವಿ. ಲಿಂಗರೆಡ್ಡಿ, ಇತರ ಸಿಬ್ಬಂದಿ ಇದ್ದರು.
ಹುಬ್ಬಳ್ಳಿ: aakash neet ವೈದ್ಯಕಿಯ ಆಕಾಂಕ್ಷಿಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ತರಬೇತಿ ನೀಡುತ್ತಿರುವ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (ಎಇಎಸ್ಎಲ್) ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಎಇಎಸ್ಎಲ್ನ ಹುಬ್ಬಳ್ಳಿ ಶಾಖೆಯ ತರಗತಿ ಕಾರ್ಯಕ್ರಮದ (ಕ್ಲಾಸ್ರೂಮ್ ಪ್ರೊಗ್ರಾಂ) ವಿದ್ಯಾರ್ಥಿ ಶುಭ್ರಾಂಶು ಅವರು, ನೀಟ್ ಯುಜಿ 2026ರಲ್ಲಿ ಪರೀಕ್ಷೆಯಲ್ಲಿ 720ಕ್ಕೆ 639 ಅಂಕದೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 2437ನೇ ಸ್ಥಾನ ಹಾಗೂ ಹುಬ್ಬಳ್ಳಿ ನಗರದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ಆಕಾಶ ಸಂಸ್ಥೆಯ ಸಹಾಯಕ ನಿರ್ದೇಶಕ ವಿಜಯಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಲ್ಲದೇ ಶಾಖೆಯ 17ಕ್ಕೂ ಹೆಚ್ಚು ವಿದ್ಯಾರ್ಥಿಗಳು 500ಕ್ಕೂ ಅಧಿಕ ಅಂಕಗಳನ್ನು ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ದೃಢಸಂಕಲ್ಪ ಮತ್ತು ಶಿಸ್ತುಬದ್ಧ ಸಿದ್ಧತೆ ಹಾಗೂ ಆಕಾಶ್ ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶನ ಮತ್ತು ವ್ಯವಸ್ಥಿತ ಕಲಿಕಾ ವಾತಾವರಣವು ಈ ಸಾಧನೆಗೆ ಕಾರಣ ಎಂದು ಅವರು ಹೇಳಿದರು.
ನೀಟ್ ಯುಜಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ವೈದ್ಯಕಿಯ ಪ್ರವೇಶ ಪರೀಕ್ಷೆಯ ಸಿದ್ಧತೆಗಾಗಿ ಭಾರತದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದರು.
ಈ ವರ್ಷ ಆಕಾಶ್ ನ ವಿದ್ಯಾರ್ಥಿಗಳು ಉನ್ನತ ಶ್ರೇಯಾಂಕಗಳನ್ನು ಪಡೆದುಕೊಂಡಿದ್ದು, ಅಗ್ರ 100ರಲ್ಲಿ 41 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯವರು ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೀಟ್ನಲ್ಲಿ ಉತ್ತಮ ಶ್ರೇಯಾಂಕ ಪಡೆದ ಹುಬ್ಬಳ್ಳಿ ಶಾಖೆಯ ತನು, ಶ್ರೇಜಾ ಕುರಿಯವರ, ಕಲಾವತಿ ಸುರಕೋಡ, ಭುವನ್ ಎಂ, ಅನನ್ಯ ಗುಪ್ತಾ, ಪ್ರಗತಿ ನರೇಗಲ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಸಾಧಕ ವಿದ್ಯಾರ್ಥಿಗಳು, ಆಕಾಶ್ ನಲ್ಲಿ ಉತ್ತಮ ತರಬೇತಿ ನೀಡಲಾಗುತ್ತಿದೆ. ಇಲ್ಲಿನ ಸಿಬ್ಬಂದಿ, ಶಿಕ್ಷಕರು ಉತ್ತಮ ವಾತಾವರಣ ನಿರ್ಮಿಸಿದ್ದು, ಕಲಿಕೆಗೆ ಉತ್ತೇಜನ ನೀಡುತ್ತಾರೆ. ನಿಯಮಿತ ಕಲ್ಪಿತ ಪರೀಕ್ಷೆಗಳು, ವಿವರವಾದ ವಿಶ್ಲೇಷಣೆ, ಸಂದೇಹಗಳ ನಿವಾರಣೆ ಮತ್ತು ಶಿಸ್ತುಬದ್ಧ ತರಗತಿ ಕಲಿಕೆಯು ನಮಗೆ ಬಹಳ ಅನುಕೂಲವಾದವು ಎಂದರು.
ಶಾಖೆಯ ಮುಖ್ಯಸ್ಥ ವಿಜಯಮಹಾಂತೇಶ ಮಠ, ಎಎಚ್ಎಂ ಸಾಗರ ಪಾಟೀಲ, ಜೋಹಾ ಸಮ್ರೀನ್, ವಿ. ಲಿಂಗರೆಡ್ಡಿ, ಇತರ ಸಿಬ್ಬಂದಿ ಇದ್ದರು.