Aadhaar ಆಧಾರ್ ಸೇವಾ ನಿರ್ವಹಣಾ ಕೇಂದ್ರ 
ಧಾರವಾಡ

Aadhaar ಧಾರವಾಡದಲ್ಲಿ ಶೀಘ್ರ ಆಧಾರ್ ಕೇಂದ್ರ

ಪ್ರಮುಖ ಮುಖ್ಯಾಂಶಗಳು

  • ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದಿಸಿದ ಅಶ್ವಿನಿ ವೈಷ್ಣವ.
  • ಧಾರವಾಡ ಕೇಂದ್ರ ಸ್ಥಗಿತಗೊಳಿಸಲಾಗಿತ್ತು.
  • ಶೀಘ್ರ ಟೆಂಡರ್ ಕರೆಯಲಾಗುವುದು.
ಈ ಕುರಿತು ಮಾಹಿತಿ ನೀಡಿರುವ ಸಚಿವ ಪ್ರಲ್ಹಾದ ಜೋಶಿ, ಜಿಲ್ಲೆಗೆ ಒಂದು ಆಧಾರ್ ಕೇಂದ್ರ ಎಂಬ ನಿಯಮದ ಪ್ರಕಾರ ಹುಬ್ಬಳ್ಳಿಯ ಕೇಂದ್ರ ಮುಂದುವರಿಸಿ, ಧಾರವಾಡ ಕೇಂದ್ರ ಸ್ಥಗಿತಗೊಳಿಸಲಾಗಿತ್ತು.
ಆದರೆ, ನನ್ನ ಮನವಿ ಮೇರೆಗೆ ಧಾರವಾಡ ಆಧಾರ್ ಕೇಂದ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಪ್ರಾರಂಭಿಸಲು ಸಚಿವ ಅಶ್ವಿನಿ ವೈಷ್ಣವ ಸಮ್ಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಧಾರವಾಡದಲ್ಲಿ ಆಧಾರ್ ಕೇಂದ್ರ ತೆರೆಯಲು ಶಾಸಕ ಅರವಿಂದ ಬೆಲ್ಲದ ಅವರೂ ನನಗೆ ಮನವಿ ಸಲ್ಲಿಸಿದ್ದರು. ನಾನು ಸಹ ಈ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಪತ್ರ ಬರೆದಿದ್ದೆ. ಆದಷ್ಟು ಶೀಘ್ರ ಧಾರವಾಡ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆಗೆ ಟೆಂಡರ್ ಕರೆಯಲಾಗುವುದು ಎಂದು ಜೋಶಿ ತಿಳಿಸಿದ್ದಾರೆ.