Aditya Anad 
ಧಾರವಾಡ

ಈಜಲು ಹೋಗಿದ್ದ ಯುವಕ ಬಾವಿಯಲ್ಲಿ ಮುಳುಗಿ ಸಾವು

ಧಾರವಾಡ: ಬಾವಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಗರದ ಹೊಸಯಲ್ಲಾಪುರದ ನುಚ್ಚಂಬಲಿ ಬಾವಿಯಲ್ಲಿ ಸೋಮವಾರ ನಡೆದಿದೆ. ಆದಿತ್ಯ ಅನಾಡ (17) ಮೃತ ಯುವಕ. ನಗರದ ಕಮಲಾಪುರ ಕೋಟಿ ಓಣಿಯ ನಿವಾಸಿಯಾಗಿರುವ ಆದಿತ್ಯ, ಕಾಲೇಜು ಮುಗಿಸಿಕೊಂಡು ಬಾವಿಯಲ್ಲಿ ಈಜಲು ತೆರಳಿದ್ದಾದ ದುರ್ಘಟನೆ ನಡೆದಿದೆ. ಈಜು ಬಾರದ ಹಿನ್ನೆಲೆ ಈತ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.