life ಹುಬ್ಬಳ್ಳಿಯ ಚೇತನ ಕಾಲೇಜ್ ಆಫ್ ಕಾಮರ್ಸ್ ಹಾಗೂ ಚೇತನ ಬಿಜಿನೆಸ್ ಸ್ಕೂಲ್ನಲ್ಲಿ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಡಾ. ವಿ.ಎಂ. ಕೊರವಿ, ಡಾ. ರಮಾಕಾಂತ ಕುಲಕರ್ಣಿ, ಪ್ರೊ. ಭಾಗ್ಯಶ್ರೀ ಹಾಗೂ ಇತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ:
ಚೇತನ ಕಾಲೇಜ್ ಆಫ್ ಕಾಮರ್ಸ್ (ಬಿಬಿಎ ಮತ್ತು ಬಿಸಿಎ) ಹಾಗೂ ಚೇತನ ಬಿಜಿನೆಸ್ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ್ಞಾನ, ಸಂಸ್ಕಾರ ಮತ್ತು ಮೌಲ್ಯಗಳ ಮೂಲಕ ಸಮಾಜ ನಿಮಾಣದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಒಬ್ಬ ಉತ್ತಮ ಗುರುಗಳ ಮಾರ್ಗದರ್ಶನ ಇರುತ್ತದೆ.
ಗುರುಗಳ ಬಗ್ಗೆ ಕೃತಜ್ಞತೆ ಮತ್ತು ಗೌರವವನ್ನು ಜೀವನ ಪರ್ಯಂತ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪದವಿ ಪಡೆಯುವ ಜತೆಗೆ ಉತ್ತಮ ವ್ಯಕ್ತಿತ್ವ, ನೈತಿಕತೆ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಗುರುಗಳ ಮಾರ್ಗದರ್ಶನ ಅಗತ್ಯ ಎಂದರು.
ಡಾ. ರಮಕಾಂತ ಕುಲಕರ್ಣಿ, ಡಾ. ಕಿಶೋರ ಪಾಂಗಿ, ಡಾ. ಎ.ಆರ್. ವಡಕಣ್ಣವರ, ಡಾ. ಪವನ ಅಪರಂಜಿ, ಪ್ರೊ. ಭಾಗ್ಯಶ್ರೀ ಹಾಗೂ ಇತರರಿದ್ದರು.