ಸ್ಮೈಲ್ ಮದರ್ಸ್ ಮೀಟ್ ಕಾರ್ಯಕ್ರಮ ಉದ್ಘಾಟನೆ
ಧಾರವಾಡ: ಮಕ್ಕಳ ಜೀವನದಲ್ಲಿ ತಾಯಿಯ ಪಾತ್ರ ಬಹುಮುಖ್ಯವಾದದ್ದು, "ತಾಯಿ' ಎಂಬ ಎರಡು ಅರಗಳಲ್ಲಿ ಇಡೀ ಪ್ರಪಂಚದ ಪ್ರೀತಿ ಅಡಗಿದೆ. ಮಗುವಿನ ಮೊದಲ ಉಸಿರಿನಿಂದ ಹಿಡಿದು ಅದರ ಪ್ರತಿಯೊಂದು ಹೆಜ್ಜೆಯಲ್ಲೂ ತಾಯಿಯ ಪಾತ್ರ ಇರುತ್ತದೆ. ತಾಯಿ ಕೇವಲ ಮಗುವಿಗೆ ಜನ್ಮ ನೀಡುವವಳಲ್ಲ. ಮಗುವಿನ ವ್ಯಕ್ತಿತ್ವ, ಸಂಸ್ಕಾರ, ಶಿಣ ಮತ್ತು ಭವಿಷ್ಯ ರೂಪಿಸುವ ಮಹಾನ್ ಶಕ್ತಿಯಾಗಿದ್ದಾಳೆ ಎಂದು ಜೆಎಸ್ಎಸ್ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಹೇಳಿದರು.
ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ. ಶಾಲೆಯಿಂದ ಜೆಎಸ್ಎಸ್ ಡಿ.ಆರ್.ಎಚ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಮೈಲ್ ಮದರ್ಸ್ ಮೀಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಗು ಶಾಲೆಗೆ ಹೋಗುವ ಮೊದಲು ಅನೇಕ ವಿಷಯಗಳನ್ನು ತಾಯಿಯಿಂದಲೇ ಕಲಿಯುತ್ತದೆ. ಆದ್ದರಿಂದಲೇ ತಾಯಿಯೇ ಮಗುವಿನ ಮೊದಲ ಗುರು. ಮಕ್ಕಳ ಜೀವನದಲ್ಲಿ ಶಿಸ್ತು ಅತ್ಯಂತ ಮುಖ್ಯ. ಸಮಯಕ್ಕೆ ಸರಿಯಾಗಿ ಎದ್ದು, ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಿ, ನಿಯಮಿತವಾಗಿ ಓದಿ, ಆಟವಾಡಿ, ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ತಾಯಿ ಮಕ್ಕಳಲ್ಲಿ ಬೆಳೆಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಚೇತನ ಸಂಪ್ರದಾಯ ಅವರು, ತಾಯಂದಿರ ಜವಾಬ್ದಾರಿ ಮತ್ತು ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ವಿವರಿಸಿದರು. ಜೆಎಸ್ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿದರು. 105 ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಶಾಲೆಯ ಪ್ರಾಚಾಯೆರ್ ರಜನಿ ಪಾಟೀಲ್, ಸಿಬ್ಬಂದಿ ಇದ್ದರು.