ಹುಬ್ಬಳ್ಳಿ: ಇಲ್ಲಿಯ ರಂಭಾಪುರಿ ಕಲ್ಯಾಣ ಮಂಟಪ ಆವರಣದಲ್ಲಿ ಶ್ರೀಮದ್ವೀರಶೈವ ಸದ್ಭೋದನಾ ಸಂಸ್ಥೆ ಮತ್ತು ಶ್ರೀ ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಜಮಖಂಡಿಗೆ ತೆರಳುತ್ತಿರುವ ಸಂದರ್ಭದಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರೀಗಳನ್ನು ಸನ್ಮಾನಿಸಿ, ಭಕ್ತಿಯಿಂದ ಬೀಳ್ಕೊಡಲಾಯಿತು.
ಯಡೆಯೂರು ಹಿರೇಮಠದ ಶ್ರೀ ರೇಣುಕ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವ ಸಿದ್ಧರಾಮೇಶ್ವರ ಸ್ವಾಮೀಜಿ, ಮಳಲಿಯ ಶ್ರೀ ನಾಗಭೂಷಣ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ಶ್ರೀಮದ್ವೀರಶೈವ ಸದ್ಭೋದನಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಶ್ರೀ ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡ್ರ, ಅದರಗುಂಚಿ ಶಿವರುದ್ರಯ್ಯ ಸ್ವಾಮೀಜಿ, ಸಿಎ ಎನ್.ಎ. ಚರಂತಿಮಠ, ಶಿವಾನಂದ ಅದೃಶ್ಯಪ್ಪನಮಠ, ಬಸವರಾಜ ಸುಳ್ಳದ, ವಿ.ಜಿ. ಪಾಟೀಲ, ಗದಗಯ್ಯ ಹಿರೇಮಠ, ಮಲ್ಲಿಕಾರ್ಜುನ ಭರಮಗೌಡ್ರ, ಎಂ.ಡಿ. ಖಾನಗೌಡ್ರ, ಸುರೇಶ ಹಿರೇಮಠ, ಈರಣ್ಣ ಪುಂಡಪ್ಪನವರ, ಗಂಗಾಧರ ತೋಟದ, ಎನ್ಎಸ್ಯುಐ ಅಧ್ಯಕ್ಷ ಶಿವಾ ಬೆಂಡಿಗೇರಿ, ಎಂ.ಕೆ. ಪಾಟೀಲ, ಎಸ್.ಸಿ. ಕಮ್ಮಾರ, ವೀರೇಶ ಪಾಟೀಲ, ಭಕ್ತರು ಇದ್ದರು.