ಆರತಿ ಶಿಕಾಮಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಧಾರವಾಡ

ಗುರು ನಮನ ಸಂಗೀತೋತ್ಸವ 9ರಂದು

ಧಾರವಾಡ: ನಾವೀಕಾ ರಂಗಭೂಮಿ ಸಂಸ್ಥೆ ಧಾರವಾಡ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಸಾಧನಕೇರಿಯ ವರಕವಿ ಡಾ. ದ.ರಾ. ಬೇಂದ್ರೆ ಭವನದಲ್ಲಿ ಆ. 9ರಂದು ಬೆಳಗ್ಗೆ 10 ಗಂಟೆಗೆ "ಗುರು ನಮನ ಸಂಗೀತೋತ್ಸವ' ಹಮ್ಮಿಕೊಂಡಿದೆ ಎಂದು ನಾವೀಕಾ ರಂಗಭೂಮಿ ಸಂಸ್ಥೆ ಅಧ್ಯಕ್ಷೆ ಆರತಿ ದೇವಶಿಖಾಮಣಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ, ಮುಖ್ಯಸ್ಥ ಕುಮಾರ ಫಕೀರೇಶ ಅಗಡಿ ಅವರು ಉದ್ಘಾಟಿಸುವರು. ಆಕಾಶವಾಣಿ "ಎ' ಶ್ರೇಣಿ ಕಲಾವಿದ ಸದಾಶಿವ ಪಾಟೀಲ ಅಧ್ಯಕ್ಷತೆ ವಹಿಸುವರು. ಸಹಾಯಕ ಪೊಲೀಸ್​ ಆಯುಕ್ತ ಡಾ. ಶಿವಾನಂದ ಚಲವಾದಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪ್ರಾಧ್ಯಾಪಕ ಡಾ. ವಿಶ್ವನಾಥ ಚಿಂತಾಮಣಿ ಅತಿಥಿಗಳಾಗಿ ಆಗಮಿಸುವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಕಾಶವಾಣಿ "ಎ' ಶ್ರೇಣಿ ಕಲಾವಿದರಾದ ಪಂ. ಸದಾಶಿವ ಐಹೋಳಿ, ಸುಜಾತಾ ಸದಾಶಿವ ಐಹೋಳಿ ಅವರು ಗೌರವ ಉಪಸ್ಥಿತರಿರುವರು. ಹಿರಿಯ ಕಲಾವಿದೆ ಪದ್ಮಾವತಿ ದೇವಶಿಖಾಮಣಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಗೀತ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಆಕಾಶ ಗೋಂಧಳಿ, ಸಿದ್ದೇಶ ಅವಟಿ, ಸುಜಾತಾ ಐಹೋಳಿ, ಭಾಗ್ಯಲಕ್ಷ್ಮೀ ಗಣೇಶಗುಡಿ, ಮಂತೇಶ್ವರ ಮಠಪತಿ ಸುದ್ದಿಗೋಷ್ಠಿಯಲ್ಲಿದ್ದರು.