ಸೈಬರ್ ವಂಚನೆ fraud 
ಧಾರವಾಡ

fraud 8 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

ಹುಬ್ಬಳ್ಳಿ: ಸೈಬರ್ ವಂಚಕರು ಲಿಂಕ್‌ವೊಂದನ್ನು ಕಳುಹಿಸಿ ಒಟಿಪಿ ಪಡೆಯದೇ ಧಾರವಾಡದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 8 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಧಾರವಾಡ ಎಂ.ಆರ್. ನಗರದ ನಿವಾಸಿ ಹನುಮಪ್ಪ ನಾಯ್ಕರ್ ವಂಚನೆಗೆ ಒಳಗಾದವರು. ಅಪರಿಚಿತರು ಹನುಮಪ್ಪ ಅವರಿಗೆ ಲಿಂಕ್‌ವೊಂದನ್ನು ಕಳುಹಿಸಿ ಒಟಿಪಿ ಬರುವಂತೆ ಮಾಡಿದ್ದಾರೆ.
ಯಾರೊಂದಿಗೆ ಹಂಚಿಕೊಳ್ಳದಿದ್ದರೂ ಹನುಮಪ್ಪ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿ ವಂಚಿಸಿದ್ದರ ಕುರಿತು ಸಿಇನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.